This is the title of the web page
This is the title of the web page

Please assign a menu to the primary menu location under menu

Local News

ಯುವಕರ ಸಧೃಢ ಭವಿಷ್ಯಕ್ಕೆ ಕ್ರೀಡೆಗಳು ಬಹಳ ಮುಖ್ಯ: ಶ್ರೀಮತಿ ಮಂಜುಳಾ ನಾಯಕ


ಹುಕ್ಕೇರಿ: ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಮಾತನಾಡಿದ ಶ್ರೀಮತಿ ಮಂಜುಳಾ ನಾಯಕ, ತಹಶೀಲ್ದಾರ ಹಾಗೂ ತಾಲೂಕು ದಂಡಾಧಿಕಾರಿಗಳು ಹುಕ್ಕೇರಿ ಇವರು ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ನಮ್ಮ ದೇಶದ ಭವಿಷ್ಯಕ್ಕಾಗಿ ಸಧೃಢ ಭಾರತಕ್ಕಾಗಿ ಇಂತಹ ಕಾರ್ಯಕ್ರಮಗಳು ಅವಶ್ಯಕ. ಯುವಕರ ಸಧೃಢ ಭವಿಷ್ಯಕ್ಕೆ ಕ್ರೀಡೆಗಳು ಬಹಳ ಮುಖ್ಯ ಎಂದು ತಿಳಿಸಿದರು.
ಇದೇ ವೇಳೆ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಸಂಯೋಜಕರಾದ ಕಿರಣ ಎಂ. ಚೌಗಲಾ ಪ್ರ. ಪ್ರಾಚಾರ್ಯರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಯರಗಟ್ಟಿ, ಇವರು ಮಾತನಾಡಿದರು.
ಈ ಕಾರ್ಯಕ್ರಮವನ್ನು, ಶ್ರೀಮತಿ ಎಸ್.ಎಸ್ ವನದಾಳೆ ನಿರೂಪಿಸಿದರು. ವಂದನಾರ್ಪಣೆಯನ್ನು ಎಸ್. ಏ ಸರೀಕರ್ ಅವರು ಮಾಡಿದರು. ಈ ವೇಳೆ ಮುಖ್ಯ ಅತಿಥಿಗಳಾಗಿ, ಶ್ರೀ. ಪಿ. ಆಯ್. ಭಂಡಾರೆ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಕ್ಕೋಡಿ, ಶ್ರೀಮತಿ ಮಂಜುಳಾ ನಾಯಕ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಹುಕ್ಕೇರಿ, ಶ್ರೀಮತಿ ಪ್ರಭಾವತಿ ಬಿ. ಪಾಟೀಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹುಕ್ಕೇರಿ, ಕಿರಣ ಎಂ. ಚೌಗಲಾ ಪ್ರ. ಪ್ರಾಚಾರ್ಯರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಯರಗಟ್ಟಿ, ಮಲ್ಲಿಕಾರ್ಜುನ ಶಿ. ನಂದಗಾವಿ ಅಧ್ಯಕ್ಷರು, ಎಸ್.ಡಿ.ಎಂ.ಸಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಯರಗಟ್ಟಿ, ಶ್ರೀ ಸಿದ್ಧಣ್ಣ ನೋಗಿನಾಳ ಗ್ರಾಮ ಪ್ರಮೂಖರು ಹಾಗೂ ಪರಿಸರ ಪ್ರೇಮಿಗಳು, ಬಸವರಾಜ ಪಾಟೀಲ್ ಗ್ರಾಮ ಪ್ರಮೂಖರು, ವಿರೂಪಾಕ್ಷಿ ಚೌಗಲಾ ಗ್ರಾಮ ಪ್ರಮೂಖರು ಹಾಗೂ ಕ್ರೀಡಾ ಪಟುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Leave a Reply