This is the title of the web page
This is the title of the web page

Please assign a menu to the primary menu location under menu

Local News

ಶ್ರಿ ಕ್ಷೇತ್ರ ಧರ್ಮಸ್ಥಳ ಮಹಿಳಾ ಜ್ಞಾನವಿಕಾಸ ಉಚಿತ ಕಣ್ಣು ತಪಾಸಣಾ ಶಿಬಿರ


ಖಾನಾಪುರ : ತಾಲೂಕಿನ ಕಡತನ ಬಾಗೇವಾಡಿ ವಲಯದ ತೊಲಗಿ ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಸದಸ್ಯರಾದ ಕಲ್ಲಪ ರಂಗನವರ ಅವರು ವಹಿಸಿಕೊಂಡರು.ಕಾರ್ಯಕ್ರಮ ಉದ್ಘಾಟಕರಾಗಿ ಮಾನ್ಯ ಯೋಜನಾಧಿಕಾರಿಗಳು ಆದ ಗಣಪತಿ ನಾಯ್ಕ ಅವರು ದೀಪವನ್ನು ಬೆಳಗಿಸುವುದರ ಮೂಲಕ ಮಹಿಳಾ ಜ್ಞಾನವಿಕಾಸವನ್ನು ಉದ್ಘಾಟಿಸಿ ಮನುಷ್ಯನಿಗೆ ಮುಖ್ಯ ವಾಗಿ ಬೇಕಾಗಿರವದು ಆರೋಗ್ಯ ಆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಆಗಿದೆ .
ಶ್ರಿ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಎಲ್ಲ ಕಡೆಯಲ್ಲಿಯು ಉಚಿತ ಆರೋಗ್ಯ ತಪಾಸಣೆಗಳನ್ನು ಮಾಡಿಸುತ್ತಿದ್ದೇವೆ. ಅದರ ಜೊತೆಗೆ ಎಲ್ಲ ಸದಸ್ಯರು ಆರ್ಥಿಕ ವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಬಿವೃದ್ಧಿ ಹೊಂದುವ ಸಲುವಾಗಿ ಧರ್ಮಸ್ಥಳ ಯೋಜನೆಯ ಮುಖಾಂತರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೇ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಹೇಳಿದರು.
ಹಾಗೆ ನಮ್ಮ ಆರೋಗ್ಯದ ದೃಷ್ಟಿಯಿಂದ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಯಾವುದೇ ರೀತಿ ಕಾಯಿಲೆಗಳು ಬರುವುದಿಲ್ಲ ಮನೆ ಮತ್ತು ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲ ಮಹಿಳೆಯರ ಆದ್ಯ ಕರ್ತವ್ಯ .ಆದ ಕಾರಣ ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವನೆಯನ್ನು ಮಾಡಿ ಆರೋಗ್ಯ ಸಮಸ್ಯೆ ಬರುವುದಿಲ್ಲ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಕವಿತಾ ಚಿಕ್ಕಮಠ ,ಕೇಂದ್ರದ ಅಧ್ಯಕ್ಷರಾದ ನೀಲಮ್ಮ ಹೊಂಡಪನವರ ,ಆರೋಗ್ಯ ಇಲಾಖೆಯವರಾದ ಅಬೆದಲಿ ಎಂ, ರಾಹುಲ್ ಹಿರೇಮನೀ , ಸೇವಾ ಪ್ರತಿನಿಧಿಗಳು ಲಕ್ಷ್ಮೀ, ಅನ್ನಪೂರ್ಣ .ಸಿ ಎಸ್ ಸಿ ಸೇವಾದಾರ ಭರತೇಶ ಕಂಚಿ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ಸಿದ್ದಪ್ಪ ಮಾಳಿ ಅವರು ನಿರೂಪಣೆ ಮಾಡಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸುರೆಖಾ ಕೋಳಿ ಸ್ವಾಗತಿಸಿ ವಂದಿಸಿದರು


Leave a Reply