ಮೂಡಲಗಿ: ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾಮಹೋತ್ಸವ ವಿವಿಧ ಧಾರ್ಮಿಕ ಹಾಗೂ ವಿವಿಧ ಗ್ರಾಮಿಣ ಸ್ಫರ್ಧೆಗಳೊಂದಿಗೆ ಫೆ.೬ರಿಂದ ಫೆ೮ ವರಿಗೆ ಸಡಗರ ಸಂಭ್ರಮದಿಂದ ಜರುಗಲಿದೆ. ಸೋಮವಾ ಫೆ೬ ರಂದು ಬೆಳಿಗ್ಗೆ ೫ ಘಂಟೆಗೆ ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಶ್ರೀ ಬಸವೇಶ್ವರ ಅಭಿಷೇಕ, ಸಾಯಂಕಾಲ ರಥೋತ್ಸವ ಜರುಗುವದು, ಬೆಳಿಗ್ಗೆ ೧೦ ಘಂಟೆಗೆ ವಾಲಿಬಾಲ ಪಂದ್ಯಾವಳಿ ಜರುಗುವವು, ರಾತ್ರಿ ರಸಮಂಜರಿ ಕಾರ್ಯಕ್ರಮ ಜರುಗುವದು
ಮಂಗಳವಾರ ಫೆ. ೭ರಂದು ಬೆಳಿಗ್ಗೆ ೫ ಘಂಟೆಗೆ ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಶ್ರೀ ಬಸವೇಶ್ವರರಿಗೆ ಅಭಿಷೇಕ, ನಂತರ ೮ ಘಂಟೆಗೆ ಗ್ರಾಮ ದೇವತೆಗಳ ಉಡಿತುಂಬುವದು ೧೦ ಘಂಟೆಗೆ ನೈವೇದ್ಯ. ೧೦ ಘಂಟೆಗೆ ಎತ್ತುಗಳ ತರೆ ಬಂಡಿ ಸ್ಪರ್ದೆ ಜರುಗುವವು.
ಈ ತರೆ ಬಂಡಿ ಸ್ಪರ್ದೆಗಳ ಉದ್ಘಾಟನಾ ಸಮಾರಂಭ ಸಾನ್ನಿಧ್ಯವನ್ನು ಹೊಸದುರ್ಗದ ಭಗೀರಥ ಪೀಠದ ಶ್ರೀ ಪರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಮತ್ತು ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು ವಹಿಸುವರು. ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಲ ಜಾರಕಿಹೊಳಿ ಉದ್ಘಾಟಿಸುವರು,
ಮುಖ್ಯ ಅತಿಥಿಗಳಾಗಿ ಕಾಂಗ್ರೇಸ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಲ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ ಲ ಜಾರಕಿಹೊಳಿ ಸೇರಿದಂತೆ ಗ್ರಾಮದ ಹಿರಿಯರು ಭಾಗವಹಿಸುವರು.
ಬುಧವಾರ ಫೆ.೮ ರಂದು ಬೆಳಿಗ್ಗೆ ಅಭಿಷೇಕ ನಂತರ ನೈವೇದ್ಯ, ನಂತರ ಬೇರೆ ಗ್ರಾಮದಿಂದ ಬಂದ ವಾಲಗ ಪ್ರಾರಂಭವಾಗುವವು ಮಧ್ಯಾಹ್ನ ೧೨ ಘಂಟೆಗೆ ಪಲ್ಲಕ್ಕಿ ಉತ್ಸವ ಜೊತೆಗೆ ಶ್ರೀ ಬಸವೇಶ್ವರ ರಥೋತ್ಸವ ಹಾಗೂ ಜಾಗನೂರದ ಲಂಕೆಪ್ಪಾ ರಾ ಹಣಮನ್ನವರ ಅವರಿಂದ ಭಕ್ತರಿಗೆ ಮಹಾಪ್ರಸಾದ ನೆರವೇರಿಸುವರು.
ಅಂದು ರಾತ್ರಿ ೧೦ ಘಂಟೆಗೆ “ಕಾಲು ಕೆದರಿದ ಹುಲಿ” ಎಂಬ ಸಾಮಾಜಿಕ ನಾಟಕಶ್ರೀ ಮಹಾಲಕ್ಷ್ಮಿದೇವಿ ನಾಟ್ಯಸಂಘ ಮಸಗುಪ್ಪಿಯವರಿಂದ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಮರು ಜಾತ್ರೆಯ ನಿಮಿತ್ಯವಾಗಿ ದಿನಾಂಕ ೧೪-೨-೨೦೨೩ ರಂದು ೧ ನಿಷದ ಗಾಡಾ ಬಂಡಿ ಸ್ಪರ್ದೆ ಜರುಗುವದು ಎಂದು ಜಾತ್ರಾ ಕಮೀಟಿಯವರು ತಿಳಿಸಿದ್ದಾರೆ.
Gadi Kannadiga > Local News > ಫೆ.೬ರಿಂದ ಮುಸಗುಪ್ಪಿಯಲ್ಲಿ ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ
ಫೆ.೬ರಿಂದ ಮುಸಗುಪ್ಪಿಯಲ್ಲಿ ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ
Suresh04/02/2023
posted on