ಬೆಳಗಾವಿ ೩೧- ಶ್ರೀ ರಾಘವೇಂದ್ರ ಗುರುಸಾರ್ವಭೌಮರರ ೩೫೨ ನೇ ಆರಾಧನಾ ಮಹೋತ್ಸವ ಹಾಗೂ ರಾಮಜಪ ಯಜ್ಞವನ್ನು ವೆಂಕಟೇಶ್ವರ ಸೇವಾ ಸಂಘ ಮತ್ತು ವೇಣುಗ್ರಾಮ ಪುರೋಹಿತ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ ದಿ. ೩೧ ಗುರುವಾರ, ಸೆ. ೧ ಶುಕ್ರವಾರ ಮತ್ತು ಸೆ. ೨ ಶನಿವಾರ ಹೀಗೆ ಮೂರದಿನಗಳ ಕಾಲ ವಡಗಾವಿ ವೆಂಕಟೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೂರು ದಿನಗಳು ಜರುಗಲಿರಿವ ಈ ಕಾರ್ಯಕ್ರಮದ ಮೊದಲ ದಿನವಾದ ಇಂದು ದಿ. ೩೧ ಗುರುವಾರದಂದು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ನಿಮಿತ್ತ ಶ್ರೀ ರಾಘವೇಂದ್ರ ಸ್ವಾಮಿ ೧೦೮ ಅಷ್ಟೋತ್ತರ, ಸತ್ಯನಾರಾಯಣ ಪೂಜೆ, ಮಹಾಪ್ರಸಾದ ವ್ಯವಸ್ಥೆ ಅಲ್ಲದೇ ಸಂಗೀತ ಕಾರ್ಯಕ್ರಮಗಳು ಜರುಗಿದವು.
ಈ ಮೂರು ದಿನಗಳಂದು ಅಯೋಧ್ಯೆಯ ಶ್ರೀರಾಮಚಂದ್ರ ದೇವರ ಸ್ಥಿರ ಪ್ರತಿಷ್ಠಾನೆಗೆ ಸಾತ್ವಿಕ ಬಲ ಹೆಚ್ಚಲಿ ಎಂಬ ಉದ್ದೇಶದಿಂದ ವೇಣುಗ್ರಾಮ ಪುರೋಹಿತ ಸಂಘಟನೆ ಹಾಗೂ ವಡಗಾವಿಯ ವೆಂಕಟೇಶ್ವರ ಸೇವಾ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಆರಾಧನಾ ಮಹೋತ್ಸವದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಾಯಂಕಾಲ ಶ್ರೀರಾಮನಾಮದ ಜಪಯಜ್ಞವನ್ನು ಇಂದು ಪ್ರಾರಂಭಿಸಿದ್ದೇವೆ. ನಾಳೆ, ನಾಡದ್ದು ಈ ಜಪ ಮುಂದೆವರೆಯಲಿz ಎಂದು ದೇವಸ್ಥಾನ ಅರ್ಚಕರಾದ ಸಂತೋಶ ಜೋಶಿಯವರು ಹೆಳಿದರು.
ರಾಘವೇಂದ್ರ ಕಟ್ಟಿ, ಎನ್.ಆರ್. ಕಳಸಾಪುರ, ಬಂಡೋಪಂತ ವಿ. ಕುಲಕರ್ಣಿ, ಸುತೇಜ ಕುಲಕರ್ಣಿ, ಸುನಿಲ ದೇಶಪಾಂಡೆ, ಎಚ್. ಆರ್. ಕೊರ್ತಿ, ಶ್ರೀರಂಗ ಸೌದಿ, ವಿನೋದ ಕುಲಕರ್ಣಿ, ಸಂಜೀವ ಬಾ. ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.
Gadi Kannadiga > Local News > ಶ್ರೀ ರಾಘವೇಂದ್ರಸ್ವಾಮಿ ಆರಾಧನಾ ಮಹೋತ್ಸವ ಮತ್ತು ರಾಮಜಪ ಯಜ್ಞ
ಶ್ರೀ ರಾಘವೇಂದ್ರಸ್ವಾಮಿ ಆರಾಧನಾ ಮಹೋತ್ಸವ ಮತ್ತು ರಾಮಜಪ ಯಜ್ಞ
Suresh31/08/2023
posted on