ಬೆಳಗಾವಿ :- ಗೋಕಾಕ ತಾಲೂಕಿನ ಕೈತನಾಳ ಗ್ರಾಮದ ಪುಣ್ಯ ಕ್ಷೇತ್ರವಾದ ಶ್ರೀಸದ್ಗುರು ನಿರುಪಾಧೀಶ್ವರ ಜಾತ್ರಾ ಮಹೋತ್ಸವವು ಅಧ್ದೂರಿಯಾಗಿ ಜರುಗಿತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ 20-03-2025 ರಂದು ಶ್ರೀ ಸದ್ಗುರು ನಿರುಪಾಧೀಶ್ವರ ಕರ್ತೃ ಗದ್ದುಗೆಗೆ ಅಭಿಷೇಕ ಅಯ್ಯಾಚಾರ ಶಿವ ಭಜನೆ ಸಪ್ತಾಹ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು.
ಎರಡನೇ ದಿವಸ 21-03-2025 ರಂದು ಶ್ರೀ ಸದ್ಗುರು ನಿರುಪಾಧೀಶ್ವರ ಮಾನವ ಧರ್ಮ ವೇದಿಕೆಯಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಆಶೀರ್ವಚನ ಹಾಗೂ ಸಾಮೂಹಿಕ ವಿವಾಹ ಮತ್ತು ಪರಮಪೂಜ್ಯ ಶ್ರೀವೀರಭದ್ರ ಮಹಾಸ್ವಾಮಿಜೀ ಗಳವರಿಗೆ ಭಕ್ತರಿಂದ ತುಲಾಭಾರ ಸೇವೆ, ಸೇರಿದಂತೆ ವೇದಿಕೆಯ ಮೇಲೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಜಾತ್ರಾ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ನಾಡಿನ ಪೂಜ್ಯರುಗಳು ಮಾತನಾಡಿ ಸದ್ಗುರು ನಿರುಪಾಧೀಶ್ವರರ ಜೀವನ ಚರಿತ್ರೆ ಮತ್ತು ಪವಾಡಗಳ ಕುರಿತು ಭಕ್ತರಿಗೆ ತಿಳಿಸಿದರು.
ನಿತ್ಯ ನಿರಂತರ ದಾಸೋಹ ಮಠ ಎಂದೇ ಪ್ರಖ್ಯಾತಿಯಾದ ಶ್ರೀ ಸದ್ಗುರು ನಿರುಪಾಧೀಶ್ವರರು ಯಾವುದೇ ಜಾತಿಗೆ ಧರ್ಮಕ್ಕೆ ಸೀಮಿತವಾದ ಮಠ ಇದಲ್ಲಾ, ಹಾಗಾಗಿ ಶ್ರೀ ಸದ್ಗುರು ನಿರುಪಾಧೀಶ್ವರರು ನಾಡಿನ ಭಕ್ತರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಸದಾ ಭಕ್ತರ ಕಷ್ಟನಷ್ಟಗಳಿಗೆ ಭಾಗಿಯಾಗಿ ಭಕ್ತರ ನಾಡಿಮಿಡಿತವಾಗಿ ಸದ್ಗುರು ನಿರುಪಾಧೀಶ್ವರರು ಜೀವನ ನಡೆಸಿದರು .ಇಂತ ಸಂತ ಮಹಾಂತರ ಸೇವೆಯನ್ನು ಯಾರು ಮಡುತ್ತಾರೋ!ಅಂತವರಿಗೆ ಸದ್ಗುರುವಿನ,ಆಶೀರ್ವಾದ ಸದಾ ಇರಲಿದೆ ಎಂದು,ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಪರಮಪೂಜ್ಯ ವೀರಭದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಅದೇ ದಿನ ಸಾಯಂಕಾಲ ಶ್ರೀ ಸದ್ಗುರು ನಿರುಪಾಧೀಶ್ವರರ ರಥೋತ್ಸವು ಸಕಲ ವಾದ್ಯ ವೈಭವಗಳೊಂದಿಗೆ ಹರ ಗುರು ಚರ ಮೂರ್ತಿಗಳ ಸಮ್ಮುಖದಲ್ಲಿ ಜರುಗಿದವು, ಸರ್ವ ಸದ್ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸದ್ಗರುವಿನ ಆಶೀರ್ವಾದ ಮತ್ತು ಪ್ರಸಾದವನ್ನು ಸ್ವೀಕರಿಸಿ ಸದ್ಗುರು ವಿನ ಕೃಪೆಗೆ ಪಾತ್ರರಾದರು.