This is the title of the web page
This is the title of the web page

Please assign a menu to the primary menu location under menu

Local News

ಫೆ ೧೭ ರಿಂದ ಪರಕನಹಟ್ಟಿಯಲ್ಲಿ ಶ್ರೀ ಸಿದ್ದಾರೂಡ ಜಾತ್ರಾ ಮಹೋತ್ಸವ


ಯಮಕನಮರ್ಡಿ: ಸಮೀಪದ ಪರಕನಹಟ್ಟಿ ಗ್ರಾಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಸಿದ್ದಾರೂಢರ ಜಾತ್ರಾ ಮಹೋತ್ಸವ ಫೆ.ದಿ.೧೭ರಿಂದ ೨೧ರ ವರಗೆ ೫ ದಿನಗಳವರಗೆ ಜರುಗಲಿದೆ.
ಕೊಣ್ಣೂರದ ಮರಡಿಮಠದ ಡಾ. ಪವಾಡೇಶ್ವರ ಸ್ವಾಮಿಜಿ ಸಾ£ದ್ಯದಲ್ಲಿ ಗೋಕಾದ ಶಾಮಾನಂದ ಆಶ್ರಮದ ಶ್ರೀ ಅತ್ಯಾನಂದ ಮಹಾಸ್ವಾಮಿಜಿ, ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತೋಲಗಿಯ ಶ್ರೀ ಅದೃಶ್ಯ ಮಹಾಸ್ವಾಮಿಜಿ, ಚಿಕ್ಕಮುನ್ನೋಳಿಯ ದಿವ್ಯ ಚೇತನ ಮಹಾಸ್ವಾಮಿಜಿ , ತವಗಮಠದ ಶ್ರೀ ಬಾಳ್ಯಯಾ ಮಹಾಸ್ವಾಮಿಜಿ, ಚಿಕ್ಕಕಟ್ಟಿಯ ಆತ್ಮಾನಂದ ಮಹಾಸ್ವಾಮಿಜಿ, ಕುರಣಿಯ ಶ್ರೀ ಆನಂದ ಮಹಾಸ್ವಾಮಿಜಿ, ಶ್ರೀ ಕೃಪಾನಂದ ಮಹಾಸ್ವಾಮಿಜಿ, ಹೊನ್ನಾಳದ ಶ್ರೀ ಸಂತೋಳ ಶಾಸ್ತ್ರೀ ಕೊಣ್ಣೂರದ ಬಾಳಪ್ಪಾ ಶರಣರು, ಬೆಣಿವಾಡದ ರಾಮಣ್ಣಾ ಶರಣರು, ಸೇರಿದಂತೆ ವಿವಿಧ ಮಹಾತ್ಮಶರಣರು ಪಾಲ್ಗೊಳಲಿದ್ದಾರೆ.
ಪ್ರಣವ ಧ್ವಜ, ಆರತಿ ಕುಂಭೋತ್ಸವ, ಪಲ್ಲಕಿ ಉತ್ಸವ, ರಥದ ಕಳಾಸಾರೋಹಣ, ಸಂಗೀತ, ಪ್ರವಚನ, ತುಲಾಭಾರ, ಕಿರೀಟ ಪೂಜೆ, ಭಜನಾ ಕಲಾಮೇಳ, ರಥೋತ್ಸವ, ಪ್ರತಿದಿನ ಸಂಜೆ ಮಹಾತ್ಮರ ಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಕರಿಕಟ್ಟಿಯ ರುದ್ರಪ್ಪಾ ಹೂಗಾರ ಹಾಗೂ ಬಸ್ಸಾಪೂರದ ಶಿವಾನಂದ ತಟಪಟ್ಟಿ ಸಂಗೀತ ಕಾರ್ಯಕ್ರಮ ಹಾಗೂ ರಾತ್ರಿ ಪರಕನಹಟ್ಟಿ, ಗೊಡಚಿನಮಲ್ಕಿ, ಕೊಣ್ಣೂರ ಮಾವನೂರ , ಹಟ್ಟಿ ಆಲೂರ, ನದಿಗುಡಕೇತ್ರ, ಹಾಗೂ ಭಜನಾ ಮೇಳದವರಿಂದ ಭಜನಾ ಕಾರ್ಯಕ್ರಮ
ಶುಕ್ರವಾರ ದಿ ೧೭ ರಂದು ಮಹಿಳೆಯರಿಂದ ಆರತಿ ಕುಂಬೋತ್ಸವ ಶ್ರೀ ಪ್ರಕಾಶನಂದರ ಪುಣ್ಯಾಶ್ರಮದಿಂದ ಪಲ್ಲಕಿ ಉತ್ಸವ ಹಾಗೂ ಕಳಾಸಾರೋಹಣ. ಶ್ರೀಅತ್ಯಾನಂದ ಮಹಾಸ್ವಾಮಿಗಳಿಗೆ ತಲಾಭಾರ ಹಾಗೂ ಕೀರಿಟ ಪೂಜೆ ಜರುಗಲಿದೆ.
ದಿ.೧೮ರಂದು ಸಿಧ್ದಾರೂಡರ ಮೂರ್ತಿಗೆ ರುದ್ರಾಭಿಳೇಕ ಹಾಗೂ ಸಹಸ್ರ ಬಿಲ್ವಾರ್ಚನೆ. ಸುಣದೋಳಿಯ ಗೆದಾಲಮ್ಮಾದೇವಿ ಹಾಗೂ ಪರಹನಟ್ಟಿ ಸಿದ್ದಾರೂಡರ ಭಜನಾ ಮೇಳದವರಿಂದ ಭಜನಾ ಕಲಾಮೇಳ, ಜರುಗಲಿದೆ. ದಿ.೧೯ ರಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಧ್ದಾರೂಡರ ಮಹಾರಥೋತ್ಸವ ಹಾಗೂ ಮಹಾಪ್ರಸಾದ , ರಾತ್ರಿ £ಜಗುಣ ಶಿವಯೋಗಿ ಧಾರ್ಮಿಕ ನಾಟಕ ಜರುಗಲಿದೆ.
೨೨ ರಂದು ಸಾಧಕರಿಗೆ ಸನ್ಮಾನ ಹಾಗೂ ಜಾತ್ರಾ ಸಮಾರೋಪಗೋಳುವುದು.


Leave a Reply