ಗೋಕಾಕ: ಬಸವತತ್ವ ಕರ್ನಾಟಕಕ್ಕೆ ಅಷ್ಟೆ ಅಲ್ಲ, ಭಾರತಕ್ಕೆ ಅಷ್ಟೆ ಅಲ್ಲಾ ಇಡಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹಂದಿಗುಂದ ಸಿದ್ದೇಶ್ವರಮಠದ ಶ್ರೀ ಶಿವಾನಂದ ಸ್ವಾಮಿಗಳು ಹೇಳಿದರು.
ಬುಧವಾರದಂದು ನಗರದ ಚನ್ನಬಸವೇಶ್ವರ ವಿದ್ಯಾ ಪೀಠದ ಆವರಣದಲ್ಲಿ ಶೂನ್ಯ ಸಂಪಾದನ ಮಠದ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ ೧೮ನೇ ಶರಣ ಸಂಸ್ಕೃತಿ ಉತ್ಸವದ ಪ್ರಥಮ ದಿನದ ಬಸವ ತತ್ವ ಸಮಾವೇಶದ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಕೆಲವರು ಬಸವತತ್ವವನ್ನು ತಮಗೆ ಬೇಕಾಗುವ ಹಾಗೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದು ನಮ್ಮ ದುರಂತ. ಬಸವತತ್ವವನ್ನು ಅರ್ಥೈಸಿಕೊಂಡು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ನಾವು ಸದೃಢ ಸಮಾಜ ನಿರ್ಮಿಸಲು ಸಾಧ್ಯ. ವಚನಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳದೇ ಸಮಾಜ ನಿರ್ಮಾಣಕ್ಕಾಗಿ ಅಳವಡಿಸಿಕೊಳ್ಳಬೇಕು. ಮಾನವರನ್ನು ಗೌರವದಿಂದ ಕಾಣುವುದೆ ಶರಣ ಸಂಸ್ಕೃತಿ ಅದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ಬಸವಣ್ಣ ಈ ನಾಡಿನ ಗುರು, ನಾಡಿನ ಉಸಿರು, ಸಮಗ್ರ ಕನ್ನಡದ ಆಸ್ತಿ ಅಂತಹ ತತ್ವ ನಿಷ್ಠೆ ಮನುಕುಲದಲ್ಲಿ ಬರಬೇಕು. ಬಸವತತ್ವವನ್ನು ಗಟ್ಟಿಯಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಪರಂಪರೆಯಯನ್ನು ಗೋಕಾಕ ನಾಡಿನ ಶ್ರೀ ಶೂನ್ಯ ಸಂಪಾದನ ಮಠ ಉಳಿಸಿ,ಬೆಳೆಸಿಕೊಂಡು ಬರುತ್ತಿರುವದು ಮಾದರಿ ಕಾರ್ಯವಾಗಿದೆ. ಜೊತೆಗೆ ಬೆಳಗಾವಿಯ ಗಡಿನಾಡನ ಉತ್ಸವವಾಗಿ ಶರಣ ಸಂಸ್ಕೃತಿ ಉತ್ಸವ ಹೊರಹೊಮ್ಮಿದೆ. ಯಾವ ಧರ್ಮದಲ್ಲಿ ದಯೆ ಇಲ್ಲವೂ ಅದು ಧರ್ಮವೇ ಅಲ್ಲ ದಯವಿರುವ ಬಸವ ತತ್ವಗಳನ್ನು ಇಂದು ಇಡಿ ವಿಶ್ವವೆ ಒಪ್ಪಿಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮುಖಾಂತರ ಚಿಂಚಣಿ ಸಿದ್ದಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಸ್ವಾಮಿಗಳು ಉದ್ಘಾಟಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಗದಗ -ಡಂಬಳನ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ವಹಿಸಿ ಆರ್ಶಿವರ್ಚನ ನೀಡಿದರು. ಸಿದ್ದೇಶ್ವರಮಠ ಹಂದಿಗುಂದ ಶ್ರೀ ಶಿವಾನಂದ ಮಹಾಸ್ವಾಮಿಗಳು, ವಿರಕ್ತಮಠ ಶೇಗುಣಿಯ ಪ್ರಭುಮಹಾಂತ ಸ್ವಾಮಿಗಳು ಮತ್ತು ಅಥಣಿಯ ಗಚ್ಚಿನಮಠದ ಶಿವಬಸವ ಸ್ವಾಮಿಗಳಿಗೆ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಅಭಿನಂದನಾ ಸನ್ಮಾನ ಮಾಡಿ ಗೌರವಿಸಿದರು ಹಾಗೂ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಡಾ.ಅಲ್ಲಮಪ್ರಭು ಸ್ವಾಮಿಗಳು, ಕಾಶಿನಾಥ್ ಸ್ವಾಮಿಗಳು, ಸಂಪಾದನ ಸ್ವಾಮಿಗಳು, ಮಡಿವಾಳರಾಜೇಂದ್ರ ಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ಬಸವಲಿಂಗ ಸ್ವಾಮಿಗಳು, ಶಿವಾನಂದ ಸ್ವಾಮಿಗಳು, ಸಂಗನಬಸವ ಸ್ವಾಮಿಗಳು, ಉತ್ಸವ ಸಮಿತಿಯ ಅಧ್ಯಕ್ಷ ಜಯಾನಂದ ಮುನವಳ್ಳಿ, ಚಂದ್ರಶೇಖರ್ ಕೊಣ್ಣೂರ, ಪ್ರಶಾಂತ್ ಕರುಬೇಟ, ರಾಜು ಬೈರುಗೋಳ, ಸದಾಶಿವ ಗುದಗಗೋಳ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರುಗಳಾದ ಆರ್.ಎಲ್.ಮಿರ್ಜಿ ಮತ್ತು ಎಸ್.ಕೆ ಮಠದ ನಿರೂಪಿಸಿ, ವಂದಿಸಿದರು.
Gadi Kannadiga > Local News > ಬಸವತತ್ವ ಇಡಿ ವಿಶ್ವಕ್ಕೆ ಮಾದರಿ: ಶ್ರೀ ಶಿವಾನಂದ ಸ್ವಾಮಿಗಳು
More important news
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಮಹಿಳೆ ನಾಪತ್ತೆ
17/03/2023
ನುಡಿದಂತೆ ನಡೆದ ಶಾಸಕ ಅನಿಲ ಬೆನಕೆ
17/03/2023