ಬೆಳಗಾವಿ ೨೫ : ದಿನಾಂಕ ೨೪.೦೪.೨೦೨೨ ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರ ಅಮೃತ ಹಸ್ತದಿಂದ ಬಾಪಟ ಗಲ್ಲಿಯಲ್ಲಿ ಶ್ರೀ. ತುಳಜಾ ಭವಾನಿ ಮಹಿಳ ಅಮಂಡಳವನ್ನು ಉದ್ಘಾಟನೆಗೊಳಿಸಿದರು.
ಶ್ರೀ. ತುಳಜಾ ಭವಾನಿ ಮಹಿಳಾ ಮಂಡಳದ ಅಧ್ಯಕ್ಷರಾಗಿ ಶ್ರೀಮತಿ. ಸವಿತಾ ಪಾಟೀಲ, ಉಪಾಧ್ಯಕ್ಷರಾಗಿ ಶ್ರೀಮತಿ. ಶಿವಾನಿ ರಜಪೂತ ಹಾಗೂ ಕಾರ್ಯದರ್ಶಿಗಳಾಗಿ ಶ್ರೀಮತಿ. ಸರೋಜಾ ಪವಾರ ಇವರನ್ನು ನೇಮಕಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ನವಹಿಂದ ಯುವಕ ಮಂಡಳ ಪದಾಧಿಕಾರಿಗಳು, ಬಾಪಟ ಗಲ್ಲಿಯ ಮುಖಂಡರುಗಳು, ವಾರ್ಡ ನಂ. ೪ ರ ನಗರ ಸೇವಕರಾದ ಜಯತೀರ್ಥ ಸವದತ್ತಿ, ಮಹಿಳಾ ಕಾರ್ಯಕರ್ತರು, ಬಿಜೆಪಿ ಮಹಿಳಾ ಮಂಡಳ ಅಧ್ಯಕ್ಷೆ ಶ್ರೀಮತಿ. ಶಿಲ್ಪಾ ಕೇಕರೆ ಹಾಗೂ ಇತರರು ಉಪಸ್ಥಿತರಿದ್ದರು.
Gadi Kannadiga > Local News > ಶಾಸಕ ಅನಿಲ ಬೆನಕೆರವರ ಅಮೃತ ಹಸ್ತದಿಂದ ಶ್ರೀ. ತುಳಜಾ ಭವಾನಿ ಮಹಿಳಾ ಮಂಡಳ ಉದ್ಘಾಟನೆ