This is the title of the web page
This is the title of the web page

Please assign a menu to the primary menu location under menu

Local News

ಅಕ್ಟೋಬರ್‌ 1 ರಂದು ಬೆಳಗಾವಿಯಲ್ಲಿ ಅದ್ಧೂರಿಯಾಗಿ ಶ್ರೀ ವೀರಭದ್ರೇಶ್ವರ ಜಯಂತಿ ಉತ್ಸವ


ಬೆಳಗಾವಿ ; ಬೆಳಗಾವಿ ನಗರದಲ್ಲಿ ಮುಂಬರುವ ಅಕ್ಟೋಬರ್‌ 1 ರಂದು ಅದ್ಧೂರಿಯಾಗಿ ಶ್ರೀ ವೀರಭದ್ರೇಶ್ವರ ಜಯಂತಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ತಿಳಿಸಿದರು..
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಘಟನೆ ವತಿಯಿಂದ ಕಳೆದ ಐದು ವರ್ಷಗಳಿಂದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೀರಭದ್ರೇಶ್ವರ ಜಯಂತಿ ಆಚರಿಸಲಾಗುತ್ತಿದೆ. ಭಾದ್ರಪಾದ ಮಾಸದ ಮೊದಲ ಮಂಗಳವಾರ ಸೆ. 19 ರಂದು ನಾಡಿನಾದ್ಯಂತ ವೀರಭದ್ರೇಶ್ವರ ಮಂದಿರ, ಮನೆ ಮನೆಗಳಲ್ಲಿ ವಿಶೇಷ ಪೂಜೆ, ಉತ್ಸವ ನಡೆಸಲಾಗುವುದು ಎಂದರು.
ಸೆ. 23 ರಂದು ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಿವಮೊಗ್ಗದಲ್ಲಿ ವೀರಭದ್ರೇಶ್ವರ ಜಯಂತಿ ಉತ್ಸವ ನಡೆಯಲಿದೆ. ಅದರಂತೆ ಸೆ. 27 ರಂದು ಬೆಂಗಳೂರಿನಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಉತ್ಸವ ನಡೆಯಲಿದ್ದು, ಶ್ರೀ ವೀರಭದ್ರೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈ ಪ್ರಶಸ್ತಿಯು ₹ 1 ಲಕ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಈ ಪ್ರಶಸ್ತಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಅಕ್ಬೋಬರ್‌ 1 ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿಭವನದಲ್ಲಿ ವಿಜೃಂಭಣೆಯಿಂದ ಶ್ರೀ ವೀರಭದ್ರೇಶ್ವರ ಜಯಂತಿ ಉತ್ಸವ ನಡೆಯಲಿದ್ದು, 5 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವರು. ಶ್ರೀಶೈಲ ಜಗದ್ಗುರು ಡಾ.ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ನಿಡಸೋಸಿ ದುರದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಾಡಿನ ನೂರಾರು ಮಠಾಧೀಶರು, ಬೆಳಗಾವಿ ಜಿಲ್ಲೆಯ ಮತ್ತು ಸಚಿವರು, ಶಾಸಕರು, ರಾಜ್ಯಸಭಾ, ಲೋಕಸಭಾ ಸದಸ್ಯರು ಪಾಲ್ಗೊಳ್ಳುವರು.
ಕಾರ್ಯಕ್ರಮಕ್ಕೂ ಮುನ್ನ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ವೀರಭದ್ರೇಶ್ವರ ಮೂರ್ತಿಯ ಭವ್ಯ ಮೆರವಣಿಯು ಕಾರ್ಯಕ್ರಮ ನಡೆಯುವ ಗಾಂಧಿಭವನಕ್ಕೆ ತೆರಳಲಿದೆ. ಈ ಮೆರವಣಿಗೆಯಲ್ಲಿ ತಲಾ 500 ಕುಂಭ ಹೊತ್ತ ಸುಮಂಗಲೆಯರು, ಪುರೋಷಿತರು, ಅರ್ಚಕರು, 500 ಪುರವಂತರು ಪಾಲ್ಗೊಳ್ಳುವರು. ವೀರಭದ್ರೇಶ್ವರ ಜಯಂತಿ ಉತ್ಸವವನ್ನು ಯಶಸ್ವಿಯಾಗಿಸುವ ಹಿನ್ನೆಲೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಪ್ರದೀಪ ಕಂಕಣವಾಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ  ಉಮೇಶ ಬಾಳಿ ,ಡಾ.ಸುಭಾಶ ಪಾಟೀಲ್ , ಪಾಕ್ಷಯ್ಯ ನೀರಲಗಿಮಠ, ಸೋಮಶೇಖರಯ್ಯ ಹಿರೇಮಠ, ಚಂದ್ರಶೇಖರ ಸವಡಿ ಮೊದಲಾದವರು ಉಪಸ್ಥಿತರಿದ್ದರು.

Leave a Reply