This is the title of the web page
This is the title of the web page

Please assign a menu to the primary menu location under menu

Local News

ಅನಧಿಕೃತ ಮೈಕ್ ತರುವಿಗೆ ಆಗ್ರಹಿಸಿ ಅನಿಲ್ ಬೇನಕೆ ಕಚೇರಿಗೆ ಶ್ರೀರಾಮ ಸೇನೆ ಮುತ್ತಿಗೆ


ಬೆಳಗಾವಿ: ನಗರದ ಮಸೀದಿಗಳ ಮೇಲಿನ ಅನಧಿಕೃತ ಮೈಕ್ ತೆರವಿಗೆ ಆಗ್ರಹಿಸಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಕಚೇರಿ ಮುಂದೆ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು..

ಶಬ್ದ ಮಾಲಿನ್ಯ ಮಾಡುವ ಹಾಗೂ ಅನಧಿಕೃತ ಮೈಕ್ ತೆರವುಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಶ್ರೀರಾಮ ಸೇನೆಯ ಪದಾಧಿಕಾರಿಗಳು ನಗರದ ಚವ್ಹಾಟ್ ಗಲ್ಲಿಯಲ್ಲಿರುವ ಶಾಸಕ ಅನಿಲ ಬೆನಕೆ ಕಚೇರಿ ಎದುರು ಪ್ರತಿಭಟನೆ ನಡೆಸಿ, ಶಾಸಕರಿಗೆ ಮನವಿ ಸಲ್ಲಿಸಿದರು.

ಇಂದಿನಿಂದ ರಾಜ್ಯಾದ್ಯಂತ ಶ್ರೀರಾಮಸೇನೆ ಎರಡನೇ ಹಂತದ ಹೋರಾಟ ನಡೆಸುತ್ತಿದ್ದು ಬೆಳಗಾವಿಯಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್ ಕೋಕಿತಕರ್ ನೇತೃತ್ವದಲ್ಲಿ ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ಕಚೇರಿ ಎದುರು ಪ್ರತಿಭಟನೆ‌ ನಡೆಸಿ ಶಾಸಕರಿಗೆ ಮನವಿ ಮಾಡಿಕೊಂಡರು.

ತಮ್ಮ ಕ್ಷೇತ್ರದಲ್ಲಿ ಇರುವ ಶಬ್ದಮಾಲಿನ್ಯ ಮಾಡುವ ಹಾಗೂ ಅನಧಿಕೃತ ಮೈಕ್‌ಗಳ ತೆರವು ಮಾಡಬೇಕು.

ಸರ್ಕಾರ ನೋಟಿಸ್ ಜಾರಿ ಮಾಡಿ ಒಂದು ತಿಂಗಳು ಕಳೆದರೂ ನಗರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ‌. ಇದು ಕಾನೂನು ನಿಂದನೆ ಆಗಿದ್ದು ಮಧ್ಯಪ್ರವೇಶಿಸಿ ಸೂಕ್ತ ಕ್ರಮಕ್ಕೆ ಕೈಗೊಳ್ಳಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇದಲ್ಲದೇ ಸುಪ್ರೀಂ ಕೋರ್ಟ್ ಆದೇಶ ಹಾಗೂ ಶಬ್ಧ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಾವಳಿ ಇದ್ದರೂ ಇದರ ಬಗ್ಗೆ ಬೇಜವಾಬ್ದಾರಿ ವರ್ತನೆ ತೋರುವ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


Gadi Kannadiga

Leave a Reply