This is the title of the web page
This is the title of the web page

Please assign a menu to the primary menu location under menu

State

ದೇಶದ 5 ಸರೋವರದಲ್ಲಿ ಪಂಪಾಸರೋವರ 1ಸಚಿವ ಶ್ರೀರಾಮುಲು


ಗಂಗಾವತಿ  : ನಿಸ್ವಾರ್ಥ ಸೇವೆಗಾಗಿ ಜಯಲಕ್ಷ್ಮಿ

ಜೀರ್ಣೋದ್ಧಾರ, ನಿಧಿ ಆಸೆಗಲ್ಲ, ಯಾವ ತನಿಖೆಗೂ ಸಿದ್ದ ಸಚಿವ ಬಿ.ಶ್ರೀ ರಾಮುಲು

ದೇಶದ ಐದು ಸರೋವರಗಳಲ್ಲಿ ಪಂಪಾಸರೋವರವು ಒಂದಾಗಿದೆ, ಆದರೆ ಇದರ ಜೀರ್ಣೋದ್ಧಾರ ಭಕ್ತರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮಾಡಲಾಗುತ್ತಿದೆ ಯಾವ ನಿಧಿ ಆಸೆಗೆ ಅಲ್ಲ. ಈ ಆರೋಪದ ಬಗ್ಗೆ ಯಾವ ತನಿಖೆ ನಡೆಸಿದರೂ ಸಿದ್ದ ನಿದ್ದೇನೆ ಎಂದು ಸಚಿವ ಬಿ.ಶ್ರೀ ರಾಮುಲು ಹೇಳಿದರು.

ಸಮೀಪದ ಪಂಪಾಸರೋವರ ಜಯಲಕ್ಷ್ಮಿ ದೇವಿ ಮೂರ್ತಿ ಪುನರ್ ಪ್ರತಿಷ್ಠಾಪನೆ ವೇಳೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭಕ್ತರು ನೀಡಿರುವ ದೇಣಿಗೆ ಹಣದಿಂದ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗುತ್ತಿದೆ ಹೊರತು ನನ್ನ ಸ್ವಂತ ಹಣದಿಂದ ಅಲ್ಲ.ಧಾರ್ಮಿಕ ಕಾರ್ಯಗಳು ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಾಡಬೇಕೆಂಬುದು ನನ್ನ ಆಸೆ ಇದೆ. ಗರ್ಭಗುಡಿ ಮಳೆ ಬಂದರೆ ಸೋರುತ್ತದೆ.ಆದ್ದರಿಂದ ಕೆಲಸಗಾರರು ಕಿತ್ತು ಹಾಕಿದ್ದಾರೆ.

ಈ ಸಣ್ಣ ತಪ್ಪು ಮಾಡಲಾಗಿದೆ. ಅದನ್ನು ಸರಿ ಪಡೆಸಿಕೊಳ್ಳಲು ಎಲ್ಲ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರು ಹೋಮ ಹವನಗಳನ್ನು ಮಾಡುವ ಮೂಲಕ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅಪಪ್ರಚಾರ, ಸುಳ್ಳು ಆರೋಪ ಸತ್ಯಕ್ಕೆ ದೂರಾಗಿದೆ. ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರ ಕಣ್ಣಿಗೆ ಕಾಣುತ್ತಿದೆ. ಈ ಪವಿತ್ರ ಸ್ಥಳ ಮೊದಲು ಹೇಗಿತ್ತು ಈಗ ಹೇಗಾಗುತ್ತಿದೆ ನೋಡಲಿ. ಈ ಭಾಗದ ಮತ್ತೊಂದು ದುರ್ಗಾದೇವಿ ದೇವಸ್ಥಾನ ಜೀರ್ಣೋದ್ಧಾರ ನಡೆಯುತ್ತಿದೆ. ಬೇರೆ ಕಡೆ ಕಲ್ಲುಗಳನ್ನು ಕೆತ್ತನೆಮಾಡಲಾಗುತ್ತಿದೆ. ನೇರವಾಗಿ ತಂದು ದೇವಸ್ಥಾನ ಸಿದ್ಧತೆ ೬ ತಿಂಗಳಲ್ಲಿ ಮಾಡಲಾಗುವುದು ಎಂದರು. ಈ ವೇಳೆ ಶಾಸಕ ಪರಣ್ಣ ಮುನವಳ್ಳಿ ಇದ್ದರು

ವರದಿ
ಹನುಮೇಶ ಬಟಾರಿ


Gadi Kannadiga

Leave a Reply