ಬೆಳಗಾವಿ ಸುವರ್ಣಸೌಧ ಡಿ.೨೩: ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರು ನೀಡಿರುವ ವರದಿಯನ್ವಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸಿ ಶೆಡ್ಯೂಲ್-೯ ರಲ್ಲಿ ಸೇರ್ಪಡೆಗೊಳಿಸಿ ಸಂರಕ್ಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮು ಹೇಳಿದರು.
ವಿಧಾನ ಪರಿಷತ್ತಿನಲ್ಲಿಂದು ಸದಸ್ಯ ಶರವಣ ಟಿ ಎ ಅವರ ಪ್ರಶ್ನೆಗೆ ಉತ್ತರಿಸಿ ಸಚಿವ ಶ್ರೀರಾಮುಲು ಮಾತನಾಡಿದರು, ಸಂವಿಧಾನದ ಶೆಡ್ಯೂಲ್-೯ ರಲ್ಲಿ ಸೇರ್ಪಡೆಗೊಳಿಸಿ ಸಂರಕ್ಷಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕ್ರಮವಹಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಪರಿಶಿಷ್ಟ ಪಂಗಡ ಸಮುದಾಯದವರ ಸಂಖ್ಯೆ ೨೦೧೧ರ ಜನಗಣತಿ ಪ್ರಕಾರ ೪೨.೪೦ ಲಕ್ಷ ಇದೆ. ನ್ಯಾ. ಹೆಚ್.ಎನ್.ನಾಗಮೋಹನ್ ದಾಸ್ ಅವರ ವರದಿಯ ಶಿಫಾರಸ್ಸಿನನ್ವಯ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ ಶೇ.೧೫ ರಿಂದ ಶೇ. ೧೭ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.೩ ರಿಂದ ೭ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ. ಬಳಿಕ ಅಧಿಸೂಚನೆಯನ್ನು ಸಹ ಹೊರಡಿಸಿ ೨೦೨೨ರ ನವೆಂಬರ್ ೧ ರಿಂದ ಜಾರಿ ತರಲಾಗಿದೆ ಎಂದು ಅವರು ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದ ೯ ನ್ಯಾಯಾಧೀಶರನ್ನೊಳಗೊಂಡ ಪೀಠವು, ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ.೫೦ನ್ನು ಮೀರಿರಬಾರದೆಂದು ಹೇಳಿದೆ. ಆದರೆ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಅಂದರೆ ಸಮುದಾಯಗಳ ಜನಸಂಖ್ಯೆಯ ನಿಖರ ಅಂಕಿ ಅಂಶಗಳು ಹಾಗೂ ಸಮುದಾಯಗಳ ಸಾಮಾಜಿಕ ಹಿಂದುಳಿಯುವಿಕೆಯ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕೋಳಿಧೋರ್,ಟೋಕ್ರೆ ಕೋಳಿ ಪರ್ಯಾಯ ಪದಗಳ ಎಸ್.ಟಿ. ಸೇರ್ಪಡೆಗೆ ಶಿಫಾರಸ್ಸು: ಹಿಂದುಳಿದ ವರ್ಗz ಪ್ರವರ್ಗ ೧ ರಲ್ಲಿರುವ ಬೆಸ್ತ,ಗಂಗಾಮತ ಮತ್ತು ಇದರ ೩೭ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಎಂದು ಸಚಿವರಾದ ಬಿ.ಶ್ರೀರಾಮುಲು ಅವರು ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿಂದು ಸದಸ್ಯ ಡಾ.ತಳವಾರ ಸಾಬಣ್ಣ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಕೋಳಿಧೊರ್,ಟೊಕ್ರೆಕೋಳಿ,ಕೊಲ್ಚಾ,ಕೊಲ್ಘಾ ವಿವಿಧ ಜಾತಿಗಳು ಇರುತ್ತವೆ. ಬೆಸ್ತ,ಗಂಗಾಮತ ಮತ್ತು ಇತರ ೩೭ ಪರ್ಯಾಯ ಪದಗಳನ್ನು ಪರಿಶಿಷ್ಠ ಪಂಗಡದ ಪಟ್ಟಿಗೆ ಸೇರಿಸಲು ಹಂಪಿ ಕನ್ನಡ ವಿವಿಯು ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡು ಅಚಿತಿಮ ವರದಿಯನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನೊಂದಿಗೆ ೨೦೧೪ ರಲ್ಲಿ ಕೇಂದ್ರಕ್ಕೆ ಕಳುಹಿಸಲಾಗಿದೆ.೨೦೧೯ ಹಾಗೂ ೨೦೨೧ ರಲ್ಲಿ ಹೆಚ್ಚುವರಿ ಮಹಿತಿ ಕಳುಹಿಸಲಾಗಿದೆ.ಭಾರತ ಸಂವಿಧಾನ ಅನುಚ್ಛೇದ ೩೪೨(೨) ಪ್ರಕಾರ ಯಾವುದೇ ಜಾತಿಯನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುತ್ತದೆ ಎಂದು ತಿಳಿಸಿದ್ದಾರೆ.
Gadi Kannadiga > Local News > ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ: ಶ್ರೀರಾಮುಲು