This is the title of the web page
This is the title of the web page

Please assign a menu to the primary menu location under menu

Local News

ಮಾನಸಿಕ ಸಮಸ್ಯೆಗೆ ದೈಹಿಕ ಶಿಕ್ಷಣ ಔಷದಿ ಇದ್ದಂತೆ: ಎಸ್.ಎಸ್ ಬಿರಾದರ


ಬಾಗಲಕೋಟೆ: ಆಧುನಿಕ ಜೀವನದಲ್ಲಿ ಮನ್ಯುಷ ಯಂತ್ರೂಪಕರಣಗಳ ಮೇಲೆ ಅವಲಂಬಿತನಾಗಿದ್ದನೆ. ನಿರಂತರವಾಗಿ ಶಾರೀರಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವ್ಯಕ್ತಿಯ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿಯೂ ಅಬಿವೃದ್ಧಿಯಾಗುತ್ತನೆ ಎಂದು ಎಸ್.ಎಸ್.ಬಿರಾದರ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಕಾಲೇಜಿನಲ್ಲಿ ಎರಡನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ದೈಹಿಕ ಶಿಕ್ಷಣ ಎಂಬುದು ಮಾನಸಿಕವಾದಂತಹ ಸಮಸ್ಯೆಗಳನ್ನು ನಿವಾರಿಸುವುದು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವುದಾಗಿದೆ. ಆತ್ಮವಿಶ್ವಾಸ,ಪ್ರಾಮಾಣಿತೆ, ಕ್ರೀಡಾ ಪ್ರಜ್ಞೆ ಸ್ನೇಹ ಕೊರತೆ ಇದನ್ನೆಲ್ಲ ಉತ್ತೇಜಿಸುತ್ತದೆ. ಇಂದಿನ ಯುವಕರೇ ಮುಂದಿನ ಪ್ರಜೆಗಳು. ಸಧೃಡ ರಾಷ್ಟ್ರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಸಲು ಯುವಕರೇ ಪ್ರಮುಖರು. ಮನುಷ್ಯನಿಗೆ ದೈಹಿಕ ಸಂಪತ್ತು ಅತ್ಯಂತ ಪ್ರಮುಖವಾದದ್ದು ಎಂದು ತಿಳಿಸಿದರು.

ಎಸ್.ವಿ.ಕಟ್ಟಿ ಮಾತನಾಡಿ ಶಿಸ್ತು, ಸಮಯ ಪ್ರಜ್ಞೆ, ಶ್ರಮ, ಸ್ವಚ್ಛತೆ, ಇದನ್ನೆಲ್ಲ ರಾಷ್ಟ್ರೀಯ ಸೇವಾ ಯೋಜನೆ ಕಲಿಸಿಕೊಡುತ್ತದೆ. ಸ್ವತಂತ್ರವಾಗಿ ಜೀವನ ನಡೆಸಲು ಇದು ಸಹಾಯಕವಾಗಿದೆ. ಸುರೇಶ ಆರ್ ಮಾತನಾಡಿ ಜವಾಬ್ದಾರಿಯ ಕುರಿತು, ಸಮಾಜದ ಸೇವೆಗೆ ತಮ್ಮನ್ನು. ಅರ್ಪಿಸಿ ಕೊಳ್ಳಬೇಕೆಂದು ಮಾನಸಿಕ ಸದೃಢತೆಗೆ ಶ್ರಮದಾನ ಅವಶ್ಯಕ, ರಾಜ್ಯ, ರಾಷ್ಟ್ರ ಹಳ್ಳಿಗಳ ಅಭಿವೃದ್ಧಿಗೆ ಈ ಶಿಬಿರ ಪ್ರಮುಖವಾದದ್ದು ಎಂದರು.

ಐಕ್ಯುಎಸಿ ಸಂಯೋಜಕರಾದ ಅಪ್ಪು ರಾಠೋಡ ಮಾತನಾಡಿ ಮಾನಸಿಕ ಆರೋಗ್ಯ ಎಂಬುವುದು ಶಿಕ್ಷಣದಲ್ಲಿ ಮಹತ್ವದ್ದಾಗಿದೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮನುಷ್ಯ ಸದೃಢವಾಗಿದ್ದರೆ ದೇಶವನ್ನು ಮುನ್ನಡೆಸಲು ಸಾಧ್ಯ.

ಈ ಸಂದರ್ಪ್ರೊಭದಲ್ಲಿ  ಎನ್. ಆರ್.ಇಂಗಳಗಿ, ಪ್ರೊ ಸಿ.ಆರ್.ಚೌಕಿಮಠ, ಪ್ರೊ ಸಿ.ಆರ್.ಚೌಕಿಮಠ, ಪ್ರೊ ಎಂ.ಎಂ.ದೇವನಾಳ ಪ್ರೊ ಎಸ್.ವಿ.ಕಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಚೈತ್ರ ಭಜಂತ್ರಿ ಸ್ವಾಗತಿಸಿದರು. ತಿಮ್ಮಣ್ಣ ಲಂಬಾಣಿ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಮೇಟಿ ವಂದಿಸಿದರು.


Gadi Kannadiga

Leave a Reply