This is the title of the web page
This is the title of the web page

Please assign a menu to the primary menu location under menu

State

ಎಸ್ಸೆಸ್ಸೆಲ್ಸಿ ಫಲಿತಾಂಶ: ಹಿರೀಕಾಸನಕಂಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉತ್ತಮ ಸಾಧನೆ


ಕೊಪ್ಪಳ ಮೇ ೧೭ : ಹಿಂದುಳಿದ ವರ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಿರೇಕಾಸನಕಂಡಿ ಕೊಪ್ಪಳ ಶಾಲೆಯು ೨೦೨೨-೨೩ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ೧೦೦ ರಷ್ಟು ಆಗಿರುತ್ತದೆ ಎಂದು ವಸತಿ ಶಾಲೆ ಪ್ರಾಂಶುಪಾಲರು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಸತಿ ಶಾಲೆಯ ೪೨ ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ ೩೭ ಅತ್ಯುನ್ನತ ಶ್ರೇಣಿ ಮತ್ತು ೦೫ ಪ್ರಥಮ ಸ್ಥಾನ ಪಡೆಯುವ ಮೂಲಕ ಎಲ್ಲಾ ೪೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಪ್ರಥಮ ಸ್ಥಾನ ಐಶ್ವರ್ಯ ಶೇ ೯೭.೬ (೬೧೦/೬೨೫), ದ್ವಿತೀಯ ಸ್ಥಾನ ಅಭಿಷೇಕ ಶೇ ೯೭.೨೮ (೬೦೮/೬೨೫) ಮತ್ತು ತೃತೀಯ ಸ್ಥಾನ ೯೬.೮ (೬೦೫/೬೨೫) ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಗಂಗಾಧರ ದೊಡ್ಡಮನಿ ಮತ್ತು ವಸತಿ ಶಾಲೆಯ ಪ್ರಾಂಶುಪಾಲರಾದ ಮಂಜುನಾಥ ಬೇಳೂರು ಹಾಗೂ ಶಿಕ್ಷಕರು, ನಿಲಯಪಾಲಕರು ಮತ್ತು ಸರ್ವ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Leave a Reply