ಗದಗ ಮಾರ್ಚ ೨೯: ಮಾರ್ಚ/ಏಪ್ರಿಲ್-೨೦೨೩ ರ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಯು ಮಾರ್ಚ ೩೧ ರಿಂದ ಎಪ್ರಿಲ್ ೧೫ ರವರೆಗೆ ಜಿಲ್ಲೆಯ ಒಟ್ಟು ೬೫ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ. ಸದರಿ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು ೧೫೨೩೫ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ತಾಲೂಕುವಾರು ವಿವರ ಇಂತಿದೆ : ಗದಗ ಶಹರ – ೨೪೮೪, ಗದಗ ಗ್ರಾಮೀಣ ೨೫೧೦, ಮುಂಡರಗಿ- ೨೦೭೨, ನರಗುಂದ-೧೬೬೧, ರೋಣ- ೩೬೫೧, ಶಿರಹಟ್ಟಿ- ೨೮೫೭ ಹೀಗೆ ಒಟ್ಟು ೧೫೨೩೫ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪ್ರಶ್ನೆಪತ್ರಿಕೆಗಳನ್ನು ಸಕಾಲದಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಒಟ್ಟು ೨೬ ಮಾರ್ಗಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಿರುತ್ತಾರೆ. ಪರೀಕ್ಷಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ವತಿಯಿಂದ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಡಯಟ ಪ್ರಾಚಾರ್ಯರು ವೀಕ್ಷಕರಾಗಿ ನೇಮಕಗೊಂಡಿರುತ್ತಾರೆ. ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ನೋಡಲ್ ಅಧಿಕಾರಿಗಳಾಗಿ ಧಾರವಾಡ ಸಿಸ್ಲಿಪ್ ನಿರ್ದೇಶಕರಾಗಿ ಬಿ.ಕೆ.ಎಸ್. ವರ್ಧನ್ ಅವರು ಬುಧವಾರದಂದು ಬಿ.ಇ.ಓ ಮತ್ತು ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರುಗಳ ಸಭೆ ನಡೆಸಿರುತ್ತಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ ಇಲಾಖೆಯ ಸಹಕಾರವನ್ನು ಪಡೆದುಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಪರೀಕ್ಷೆಯನ್ನು ಬರೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಎಸ್.ಎಸ್.ಎಲ್.ಸಿ. ಪರೀಕ್ಷೆ : ೧೫೨೩೫ ವಿದ್ಯಾರ್ಥಿಗಳ ನೋಂದಣಿ
ಎಸ್.ಎಸ್.ಎಲ್.ಸಿ. ಪರೀಕ್ಷೆ : ೧೫೨೩೫ ವಿದ್ಯಾರ್ಥಿಗಳ ನೋಂದಣಿ
Suresh29/03/2023
posted on
More important news
ಪ್ರತಿಬಂಧಕಾಜ್ಞೆ ಜಾರಿ
08/06/2023