ಬೆಳಗಾವಿ,ಮೇ.೧೯: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬೆಳಗಾವಿಯ ಕಿವುಡ ಮಕ್ಕಳ ಸರ್ಕಾರಿ ಶಾಲೆಯ ಒಟ್ಟು ೧೧ ವಿದ್ಯಾರ್ಥಿನಿಯರಲ್ಲಿ ೮ ಜನ ಂ ಗ್ರೇಡ್, ಇಬ್ಬರು ಃ+ ಗ್ರೇಡ್ ಹಾಗು ಒಬ್ಬರು ಅ+ ಗ್ರೇಡ್ ಪಡೆದು ಉತ್ತೀರ್ಣರಾಗಿರುತ್ತಾರೆ. ಪ್ರತಿಭಾ ಹಣಮಂತ ಹೊನ್ನಾಪುರ ೮೭% ಪ್ರಥಮ, ಪವಿತ್ರಾ ಪರಪ್ಪ ಕಾಪ್ಸೆ ೮೬% ದ್ವಿತೀಯ, ಹಾಗೂ ರುದ್ರಾಕ್ಷಿ ಸಂಗೊಳ್ಳಿ ೮೫% ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ಎ. ಎಮ್ ಹಾಗು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಶಾಲೆಯ ಪ್ರಭಾರ ಅಧಿಕ್ಷಕರಾದ ಡಿ.ಎನ್ ನಂದೇಶ್ವರ, ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ಮಕ್ಕಳ ಯಶಸ್ಸಿಗೆ ಅಭಿನಂದಿಸಿದ್ದಾರೆ.