ಬೆಳಗಾವಿ: ಎಸ್ಎಸ್ಎಲ್ಸಿ ವಿದ್ಯಾರ್ಥಿಯೊರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಗರದ ಮಜಗಾವಿಯ ಮಂಥನ ನಾಭಿರಾಜ್ ಪಾಟೀಲ್ ಮೃತ ದುರ್ದೈವಿಯಾಗಿದ್ದು ಸೇಂಟ್ ಪಾಲ್ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತಿದ್ದನು. ಮಂಥನ್ ಒಳ್ಳೆಯ ಕ್ರೀಡಾಪಟುವಾಗಿದ್ದ, ಶಾಲೆಯಲ್ಲಿ ಸ್ಪೋಟ್ರ್ಸ ಕ್ಯಾಪ್ಟನ್ ಕೂಡ ಆಗಿದ್ದ. ರವಿವಾರ ಬೆಳಿಗ್ಗೆ ಬಾತ್ರೂಮ್ಗೆ ಹೋದಾಗ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಬಹಳ ಹೊತ್ತು ಹೊರಗೆ ಬಾರದ ಹಿನ್ನೆಲೆ ಆತಂಕಗೊಂಡ ಪಾಲಕರು ಬಾಗಿಲನ್ನು ಮುರಿದು ನೋಡಿದಾಗ ಮಂಥನ್ ಉಸಿರು ಚೆಲ್ಲಿದ್ದ,
ಮಗನ ಈ ಅಕಾಲಿಕ ನಿಧನದಿಂದ ತಂದೆ-ತಾಯಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಂತರ ನಡೆದ ಮಂಥನ್ ಅಂತ್ಯಕ್ರಿಯೆಯಲ್ಲಿ ಶಾಲೆಯ ಪ್ರಿನ್ಸಿಪಾಲ್, ಶಿಕ್ಷಕರು ಹಾಗೂ ಸ್ನೇಹಿತರು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು.