This is the title of the web page
This is the title of the web page

Please assign a menu to the primary menu location under menu

Local News

ಶಿವಯೋಗೀಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ


ಯರಗಟ್ಟಿ: ಸಮೀಪದ ಭಾಗೋಜಿಕೊಪ್ಪ ಗ್ರಾಮದ ಶ್ರೀ ಶಿವಯೋಗೀಶ್ವರ ಜಾತ್ರಾ ವಿವಿಧ ಕಾರ್ಯಕ್ರಮಗಳಿಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಶ್ರೀಗಳು ಶರಣರು ೧೨ನೇ ಶತಮಾನದಲ್ಲಿ ಶರಣ ಕ್ರಾಂತಿಯನ್ನು ಮಾಡಿದರು. ಅವರು ರಚಿಸಿದ ವಚನಗಳು ಕ್ರಾಂತಿಯ ವಿಚಾರಗಳನ್ನು ಹೊಂದಿವೆ. ಶರಣರಲ್ಲಿ ಎಲ್ಲಾ ಜಾತಿಯ ಜನರು ಇದ್ದರು. ಮೇಲ್ವರ್ಗದ ಜನರು ಹಾಗು ಕೆಳವರ್ಗದ ಜನರು ಎಲ್ಲರೂ ಒಟ್ಟಿಗೆ ಸೇರಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಅವರಲ್ಲಿ ಪ್ರಮುಖರು ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಉರಿಲಿಂಗ ಪೆದ್ದಿ, ಸೂಳೆ ಸಂಕವ್ವ ಪ್ರಮುಖರು. ಇವರೆಲ್ಲರು ಸಹಸ್ರಾರು ಸಂಖ್ಯೆಯಲ್ಲಿ ವಚನಗಳನ್ನು ಬರೆದಿದ್ದಾರೆ.
ಎಲ್ಲರನ್ನೂ ಸಮಾನವಾಗಿ ಕಾಣುವ, ಸರ್ವರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುವ ಧರ್ಮ ಶರಣ ಧರ್ಮವಾಗಿದೆ. ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು. ಶರಣ ಧರ್ಮವು ಉದಾರ, ವೈಚಾರಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿದ್ದು, ರೂಢಿಗತವಾಗಿ ಲಿಂಗಾಯತ, ವೀರಶೈವ ಧರ್ಮ ಎಂದು ಕರೆಯುವ ಬದಲಿಗೆ ಶರಣ ಧರ್ಮ ಎನ್ನುವುದೇ ಸೂಕ್ತ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ಧಲಿಂಗ ಶ್ರೀಗಳು, ಶಾಂತವೀರ ಶ್ರೀಗಳು, ಗುರುಸಿದ್ದಲಿಂಗ ಶ್ರೀಗಳು, ಗಣಪತಿ ಮಹಾರಾಜರು, ಪ್ರವಚನ ಚತುರ ಬಸವರಾಜ ಶ್ರೀಗಳು, ಮಹಾರುದ್ರ ಯೋಗ್ಯ ಹಿರೇಮಠ, ಚಿದಾನಂದ ಶರಣು, ಸಂಗಯ್ಯಸ್ವಾಮಿ, ಬಿ. ಬಿ. ಹಾಲ್ಲೋಳ್ಳಿ, ಮಲ್ಲಿಕಾರ್ಜುನ ಗಾಣಗಿ, ಬಸವರಾಜ ಕೊಪ್ಪದ, ಶಂಕರಗೌಡ ಪಾಟೀಲ, ಅಪ್ಪಯ್ಯ ಕಪ್ಪತಿ, ನಾಗಪ್ಪ ಶಿಗ್ಗಾಂವಿ, ಅಶೋಕ ಕರಿಗಣ್ಣವರ, ಶ್ರೀಶೈಲ ನಾವಿ, ಮಂಜುನಾಥ ಹಿರೇಮಠ, ಬಸವರಾಜ ಮಳಲಿ, ಬಸವರಾಜ ತೋಟಗಿ, ರಮೇಶ ತೋಟಗಿ ಸೇರಿದಂತೆ ಅನೇಕ ಹಾಗೂ ಶ್ರೀಮಠ ಭಕ್ತರು ಉಪಸ್ಥಿತರಿದ್ದರು


Leave a Reply