This is the title of the web page
This is the title of the web page

Please assign a menu to the primary menu location under menu

Local News

ದೇಗುಲ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ


ಬೆಳಗಾವಿ: “ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ಈವರೆಗೆ ಆಗದಷ್ಟು ಗರಿಷ್ಠ ಪ್ರಮಾಣದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಜನತೆ ಸಹಕಾರದೊಂದಿಗೆ ಕ್ಷೇತ್ರವನ್ನು ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯಗಳ ಮೂಲಕ ನೈಜ ಮಾದರಿಯಾಗಿ ಮುನ್ನಡೆಸುವ ಗುರಿ ಹೊಂದಿದ್ದೇನೆ” ಎಂದು ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ ಹೇಳಿದರು.
ಅರಳೀಕಟ್ಟಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಅವರು ಈಗಾಗಲೇ ೨೦ ಲಕ್ಷ ರೂ. ಮಂಜೂರು ಮಾಡಿಸಿದ್ದು ಈ ಅನುದಾನದ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕರಪತ್ರಗಳ ವಿತರಣೆಗೆ ಲಕ್ಷಿ÷್ಮÃ ಹೆಬ್ಬಾಳಕರ ಚಾಲನೆ ನೀಡಿದರು. ಈ ಸಮಯದಲ್ಲಿ ಶಿವಮೂರ್ತಿ ಅಜ್ಜನವರು, ಗ್ರಾಮದ ಹಿರಿಯರು, ಸಿ.ಸಿ. ಪಾಟೀಲ ಅಣ್ಣ, ಅಡಿವೇಶ ಇಟಗಿ, ಸಿದ್ದಣ್ಣ ಸಿಂಗಾಡಿ, ಶಿವಾನಂದ ಹಲಕರ್ಣಿಮಠ, ರಾಜು ಉಪ್ಪಾರ, ನಾಗಣ್ಣ ಮೆನೆನಿ, ರಾಜು ಕಟ್ಟಿಕರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.


Leave a Reply