This is the title of the web page
This is the title of the web page

Please assign a menu to the primary menu location under menu

Local News

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ..?: ಗುರುವಾರ ರಾಜ್ಯ ಸಚಿವ ಸಂಪುಟ ಸಭೆ


ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊರೋನಾ ಆರ್ಭಟಿಸುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕೊರೋನಾ ಮಹಾಸ್ಪೋಟವೇ ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ ಹೆಚ್ಚಳವಾಗುತ್ತಿದೆ.

ಇದೇ ಕಾರಣದಿಂದಾಗಿ ನಾಳೆ ಸಿಎಂ ನೇತೃತ್ವದಲ್ಲಿ ತಜ್ಞರ ಸಭೆ, ಈ ಬಳಿಕ ಗುರುವಾರ ರಾಜ್ಯ ಸಚಿವ ಸಂಪುಟ ಸಭೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನಡೆಸಲಿದ್ದಾರೆ. ಈ ಸಭೆಗಳಲ್ಲಿ ಬೆಂಗಳೂರು ಸೇರಿದಂತೆ ಕೊರೋನಾ ಹೆಚ್ಚಳದ ಪಾಸಿಟಿವಿಟಿ ದರ ಹೆಚ್ಚಳವಿರುವಂತ ಜಿಲ್ಲೆಗಳಲ್ಲಿ ಲಾಕ್ ಡೌನ್ ನಂತರ ಕಠಿಣ ರೂಲ್ಸ್ ಜಾರಿಯ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಕರುನಾಡಿಗೆ ಅಪ್ಪಳಿಸಿದ್ಯಾ ಕೊರೋನಾ 3ನೇ ಅಲೆ ಎನ್ನುವ ಭಯವನ್ನು ಬೆಂಗಳೂರಿನ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಯಿಂದ ಆತಂಕ ಮೂಡಿದೆ. ಇದೇ ಕಾರಣಕ್ಕಾಗಿ ನಾಳೆ ತಜ್ಞರ ನೇತೃತ್ವದಲ್ಲಿ ನಡೆಸಲಿರುವಂತ ಸಿಎಂ ಬಸವರಾಜ ಬೊಮ್ಮಾಯಿಯವರು, ಮಹತ್ವದ ನಿರ್ಧಾರದ ಕ್ರಮಗಳನ್ನು ಪ್ರಕಟಿಸಲಿದ್ದಾರೆ.

ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾಳೆ ತಜ್ಞರ ಜೊತೆಗೆ ಸಭೆಯನ್ನು ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಕೊರೋನಾ, ಒಮಿಕ್ರಾನ್ ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಚರ್ಚಿಸಲಾಗುತ್ತದೆ. ತಜ್ಞರು ನೀಡುವಂತ ಸಲಹೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.

ಇನ್ನೂ ಗುರುವಾರ ರಾಜ್ಯ ಸಚಿವ ಸಂಪುಟ ಸಭೆಯನ್ನು ನಡೆಸಲಾಗುತ್ತದೆ. ಈ ಸಂಪುಟ ಸಭೆಯಲ್ಲಿ ದೀರ್ಘಾವಧಿಯ ಯಾವೆಲ್ಲಾ ಕ್ರಮಗಳನ್ನು ಕೊರೋನಾ ನಿಯಂತ್ರಣಕ್ಕಾಗಿ ತಜ್ಞರ ಸಲಹೆಯ ಮೇರೆಗೆ ಕೈಗೊಳ್ಳಬಹುದು ಎನ್ನುವ ಕುರಿತಂತೆ ಚರ್ಚಿಸಲಾಗುತ್ತದೆ. ಆ ಬಳಿಕ ಕೊರೋನಾ ನಿಯಂತ್ರಣಕ್ಕಾಗಿ ಕಠಿಣ ನಿರ್ಧಾರದ ಬಗ್ಗೆ ಪ್ರಕಟಿಸಲಾಗುವುದಾಗಿ ತಿಳಿಸಿದರು.


Gadi Kannadiga

Leave a Reply