This is the title of the web page
This is the title of the web page

Please assign a menu to the primary menu location under menu

State

“ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಕೊಪ್ಪಳ ಜಿಲ್ಲಾ ಘಟಕ ರಚನೆ


ಕಾರ್ಯಕರ್ತರ ಜಿಲ್ಲಾ ಘಟಕ ರಚನೆ

“ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಕೊಪ್ಪಳ ಜಿಲ್ಲಾ ಘಟಕ ರಚಿಸಲಾಯಿತು”

ಕುಷ್ಠಗಿ: ಪಟ್ಟಣದ ಐಬಿಯಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ)ಯ ಕೊಪ್ಪಳ ಜಿಲ್ಲಾ ಘಟಕ ರಚಿಸಲಾಯಿತು . ಈ ಸಭೆಯಲ್ಲಿ ಹಾಜರಿದ್ದ ಕಲ್ಯಾಣ ಕರ್ನಾಟಕದ ವಿಭಾಗೀಯ ಅಧ್ಯಕ್ಷರಾದ ಚೆನ್ನಯ್ಯ ವಸ್ತ್ರದ ಮಾತನಾಡಿ “ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಹಾಗೂ ಸಂವಿಧಾನದ ಅಡಿಯಲ್ಲಿ ಸಮಾಜಮುಖಿ ಕೆಲಸ ಮಾಡಿ ಕುಟುಂಬಕ್ಕೆ ಮತ್ತು ಗ್ರಾಮಕ್ಕೆ ಒಳ್ಳೆಯ ಹೆಸರು ತರಬೇಕು . ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು ಎಂದು ಮಾತನಾಡಿದರು”.ರಾಜ್ಯ ಮಾಧ್ಯಮ ಕಾರ್ಯದರ್ಶಿಯಾದ ಮರಿಗೌಡ ಬಾದರದಿನ್ನಿ ಇವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ ಕಾರ್ಯಕ್ರಮ ಯಶಸ್ವಿಯಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಶಾಡಲಗೇರಿ ,ಉಪಾಧ್ಯಕ್ಷರಾಗಿ ವಿಜಯ ಮಾಲಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಧರ್ಮಣ ಭಜಂತ್ರಿ, ಸಹಕಾರ್ಯದರ್ಶಿಯಾಗಿ ವೀರೇಶ ದೋಟಿಹಾಳ, ಜಿಲ್ಲಾ ಮಾಧ್ಯಮ ಕಾರ್ಯದರ್ಶಿಯಾಗಿ ಆರ್ ಶರಣಪ್ಪ ಗುಮಗೇರಾ, ಜಿಲ್ಲಾ ಸಹ ಮಾಧ್ಯಮ ಕಾರ್ಯದರ್ಶಿಯಾಗಿ ವೀರೇಶ ಉಳ್ಳಾಗಡ್ಡಿ, ಖಜಾಂಚಿ ವೀರೇಶ ಉಪ್ಪಾರ, ಸುನಿಲ್ ಕುಮಾರ್ ಸಂಚಾಲಕರು, ರಂಗಪ್ಪ ಬಳೆಗಾರ ಕಾರ್ಯದರ್ಶಿ, ಕಿರಣ್ ಬ್ಯಾಳಿ ಸಹಕಾರ್ಯದರ್ಶಿ, ಯಮನೂರ್ ಕ್ಯಾದಿಗುಪ್ಪ ಸಂಚಲನ ಕಾರ್ಯದರ್ಶಿ, ಸದಸ್ಯರಾದ ಕುಮಾರ್ ಗುಡದೂರು, ಕನಕಪ್ಪ ರಾಮಸ್ವಾಮಿ, ಲೋಕೇಶ ಹುಲ್ಲೂರ ಮತ್ತು ಪತ್ರಿಕಾ ಮಾಧ್ಯಮದವರು ಉಪಸ್ಥಿತಿರಿದ್ದರು.

 

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Gadi Kannadiga

Leave a Reply