ಬೆಳಗಾವಿ -ಜ.೨೭- ಬೆಳಗಾವಿಯ ಮಹಂತೇಶ ನಗರದ ಮಹಂತ ಭವನದಲ್ಲಿ ಜನವರಿ ೨೯ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ರಾಜ್ಯಮಟ್ಟದ ೨೭ನೇ ವೀರಶೈವ ಲಿಂಗಾಯತ ವಧುವರ ಸಮಾವೇಶವನ್ನ ಆಯೋಜಿಸಲಾಗಿದೆ. ಶಿವಮೊಗ್ಗದ ಶ್ರೀ ಗುರು ಶಾಂತೇಶ್ವರ ಸೇವಾ ಸಮಿತಿಯ ವತಿಯಿಂದ ಈ ಸಮಾವೇಶವನ್ನ ಆಯೋಜಿಸಲಾಗಿದೆ. ಹಲವಾರು ಸಮಾಜಿಕ ಸೇವೆಯ ಕಾರ್ಯಗಳನ್ನ ನಡೆಸುತ್ತಿರುವ ಈ ಸಂಸ್ಥೆಯು ಬೆಳಗಾವಿಯು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ವೀರಶೈವ ಲಿಂಗಾಯತ ವಧುವರ ಅನ್ವೇಷಣಾ ಕೇಂದ್ರವನ್ನು ಹೋದಿದ್ದು ಈ ಮುಖಾಂತರ ಮತ್ತು ಕಳೆದ ೨೭ ವರ್ಷಗಳಿಂದ ರಾಜ್ಯಮಟ್ಟದ ವಧುವರ ಸಮಾವೇಶಗಳನ್ನ ನಡೆಸಿ ಅನೇಕ ವಧುವರರು ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಲು ಕಾರಣವಾಗಿದೆ ಎಂದು ಶ್ರೀ ಗುರು ಶಾಂತೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿಗಳಾದ ವೇ.ಮಹಾಲಿಂಗಯ್ಯ ಶಾಸ್ತ್ರಿ ನಂದಗಾವಿಮಠ ತಿಳಿಸಿದ್ದಾರೆ. ಅವರು ಇಂದು ನಗರದ ಸಾಹಿತ್ಯ ಭವನದಲ್ಲಿ ಈ ಕುರಿತು ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ವಿಷಯವನ್ನ ತಿಳಿಸಿದರು.
ಅವರು ಮುಂದುವರಿದು ಮಾತನಾಡಿ ದಿನಾಂಕ ೨೯ರಂದು ಬೆಳಗಾವಿಯಲ್ಲಿ ನಡೆಯುವ ವಧುವರ ಸಮಾವೇಶಕ್ಕೆ ಸಮಾಜದ ವೈದ್ಯ, ಇಂಜಿ£ಯರ್, ಅನೇಕ ವಿಧದ ವೃತ್ತಿಶಿಕ್ಷಣ ಪಡೆದವರು ಮತ್ತು ಎಲ್ಲಾ ರೀತಿಯ ಶಿಕ್ಷಣ ಮತ್ತು ಉದ್ಯೋಗ ಹೋದಿರುವ ಸುಮಾರು ೫೦೦ಕ್ಕು ಹೆಚ್ಚು ವಧು-ವರರು ಆಗಮಿಸುವ £ರೀಕ್ಷೆ ಇದೆ. ಪ್ರತಿ ವಧು ವರರಿಗೆ ೧೦೦ ರೊಗಳ ಪ್ರವೇಶ ಶುಲ್ಕವನ್ನ £ಗದಿಪಡಿಸಲಾಗಿದ್ದು ಪಿಯುಸಿ ವಿದ್ಯಾರ್ಹತೆಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ ವಧುಗಳಿಗೆ ಕೇಂದ್ರದಲ್ಲಿ ಉಚಿತನೊಂದಾಣಿ ಮಾಡಿಕೊಳ್ಳಲಾಗುವುದು. ಸಮಾವೇಶ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಪ್ರವೇಶದ ಗುರುತಿನ ಚೀಟಿ ಪಡೆಯಲು ಮತ್ತು ಹೆಚ್ಚಿನ ವಿವರಗಳಿಗೆ ೦೮೩೧-೩೫೦೦೭೦೧, ಮತ್ತು ತಿತಿತಿ.ಟiಟಿgಚಿಥಿಚಿಣhತಿeಜs.ಛಿom <hಣಣಠಿ://ತಿತಿತಿ.ಟiಟಿgಚಿಥಿಚಿಣhತಿeಜs.ಛಿom> ಸಂಪರ್ಕಿಸಲು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಂಕರಯ್ಯ ಶಾಸ್ತ್ರಿ, ಶಿವಾನಂದ ಶಾಸ್ತ್ರಿ ಮತ್ತು ಸುಮಾ ಎಂಎಸ್ ಉಪಸ್ಥಿತರಿದ್ದರು