ಬೆಳಗಾವಿ, ಆ.೧೬ : ಪ್ರತಿ ವರ್ಷದಂತೆ ಈ ವರ್ಷವೂ ಅಗಸ್ಟ್ ೧೫, ೨೦೨೩ ರಿಂದ ಸೆಪ್ಟೆಂಬರ್ ೨೦, ೨೦೨೩ ರವರೆಗೆ ರಾಜ್ಯಾದ್ಯಂತ ನಂದಿನಿ ಸಿಹಿ ಉತ್ಸವವನ್ನು ಆಚರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ಒಕ್ಕೂಟದಿಂದ ಜಿಲ್ಲೆಯಾದ್ಯಂತ ಸಹ ಅಗಸ್ಟ್ ೧೫, ೨೦೨೩ ರಂದು ಒಕ್ಕೂಟದ ಮುಖ್ಯದ್ವಾರದ ನಂದಿನಿ ಮಳಿಗೆಯ ಮುಖಾಂತರ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಕೃಷ್ಣಪ್ಪ ರವರು, ಹಾಗೂ ಸ್ಥಾನಿಕ ಶಾಲಾ ವಿದ್ಯಾರ್ಥಿನಿಯಿಂದ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿಲಾಯಿತು ಹಾಗೂ ಬೆಳಗಾವಿ ನೆಹರು ನಗರ ಮಳಿಗೆಯ ಮುಖಾಂತರ ಬೆಳಗಾವಿ ತಾಲೂಕಿನ ನಿರ್ದೇಶಕರಾದ ಕಲ್ಲಪ್ಪಾ.ಎನ್. ಗಿರೆಣ್ಣವರ ರವರು ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿದರು.
ಅದೇ ರೀತಿಯಲ್ಲಿ ಬೆಳಗಾವಿ ಜಿಲ್ಲೆಯ ಆಯಾ ತಾಲ್ಲೂಕಿನ ನಿರ್ದೇಶಕರಿಂದ ನಂದಿನಿ ಸಿಹಿ: ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.
ಜಿಲ್ಲೆಯಾದ್ಯಂತ ಎಲ್ಲ ಗ್ರಾಹಕರಿಗೆ ನಂದಿನಿ ಸಿಹಿ ಉತ್ಪನ್ನಗಳನ್ನು ಶೇ. ೨೦ ರ ರಿಯಾಯಿತಿ ದರದಲ್ಲಿ ಖರೀದಿಸಲು ಹಾಗೂ ಇದರ ಸಯೋಪಯೋಗ ಪಡೆಯಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕರು (ಮಾರುಕಟ್ಟೆ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ರಾಜ್ಯಾದ್ಯಂತ ನಂದಿನಿ ಸಿಹಿ ಉತ್ಸವ ಸೆ.೨೦ ರವರೆಗೆ
ರಾಜ್ಯಾದ್ಯಂತ ನಂದಿನಿ ಸಿಹಿ ಉತ್ಸವ ಸೆ.೨೦ ರವರೆಗೆ
Suresh16/08/2023
posted on
