ಬೆಳಗಾವಿ, ಜು.೧೯ : ಸರ್ಕಾರವು ಮುಕ್ತ ಮಾರುಕಟ್ಟೆಯಲ್ಲಿ ಗೋಧಿ, ತೋಗರಿ ಬೆಳೆ ಹಾಗೂ ಉದ್ದಿನ ಬೆಳೆ ದರವನ್ನು ಅಗತ್ಯ ವಸ್ತುಗಳ ಕಾಯ್ದೆ ೧೯೫೫ ರ ಹಾಗೂ ಕರ್ನಾಟಕ ಸರ್ಕಾರದ ತಿದ್ದುಪಡಿ ಅಗತ್ಯ ವಸ್ತುಗಳ ಲಾಯನ್ಸ್ಸಿಂಗ್ ಆದೇಶ ೧೯೮೬ ರಡಿ ಗೋಧಿಗೆ ಸಂಬಂಧಿಸಿದಂತೆ, ಸಗಟು ವ್ಯಾಪಾರಸ್ಥರಿಗೆ ೩೦೦೦ ಮೆ.ಟನ್ ಹಾಗೂ ಕಿರುಕುಳ ವ್ಯಾಪಾರಸ್ಥರಿಗೆ ೧೦ ಮೆ.ಟನ್ ಹಾಗೂ ತೋಗರಿ ಮತ್ತು ಉದ್ದಿನ ಬೆಳೆಗೆ ಸಂಬಂಧಿಸಿದಂತೆ ಸಗಟು ವ್ಯಾಪಾರಸ್ಥರಿಗೆ ೨೦೦ ಮೆ.ಟನ್ ಹಾಗೂ ಕಿರುಕುಳ ವ್ಯಾಪಾರಸ್ಥರಿಗೆ ೫ ಮೆ.ಟನ್ ಈ ರೀತಿ ಮೇಲೆ ನಮೂದಿಸಿದ ಆದೇಶದಲ್ಲಿ ದಾಸ್ತಾನು ಮಿತಿಯನ್ನು ವಿಧಿಸಲಾಗಿದ್ದು ಜಿಲ್ಲೆಯಲ್ಲಿರುವ ಎಲ್ಲ ಸಗಟು, ಕಿರುಕುಳ ಹಾಗೂ ಗೋಧಿ ಪ್ಲೋರ್ ಮೀಲ್ ವ್ಯಾಪಾರಸ್ಥರು ಸದರಿ ದಾಸ್ತಾನು ಮಿತಿಗೆ ಒಳಪಟ್ಟು ದಾಸ್ತಾನನ್ನು ನಿರ್ವಹಿಸತಕ್ಕದ್ದು, ಇದನ್ನು ಹೊರತು ಪಡಿಸಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಮತ್ತು ಹೆಚ್ಚಿನ ದಾಸ್ತಾನು ನಿರ್ವಹಿಸಿದ್ದಲ್ಲಿ ನಿಯಮಾನುಸಾರದ ಮೇಲೆ ನಮೂದಿಸಿದ ಕಲಂ ರಡಿ ಕಾನೂನು ರೀತ್ಯ ಕ್ರಮವನ್ನು ವಹಿಸಲಾಗುವುದು.
ಸದರಿ ದಾಸ್ತಾನು ಮಿತಿಯನ್ನು ಗೋಧಿಗೆ ಸಂಬಂಧಿಸಿದಂತೆ ಮಾ.೩೧ ೨೦೨೪ ರವರೆಗೆ ಹಾಗೂ ತೋಗರಿ ಮತ್ತು ಉದ್ದಿನ ಬೆಳೆಗೆ ಸಂಬಂಧಿಸಿದಂತೆ ಅಕ್ಟೋಬರ ೩೧ ೨೦೨೩ ರವರೆಗೆ ಜಾರಿಯಲ್ಲಿ ಇರುತ್ತದೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಮುಕ್ತ ಮಾರುಕಟ್ಟೆಯಲ್ಲಿ ಗೋಧಿ, ತೋಗರಿ ಬೆಳೆ ಮತ್ತು ಉದ್ದಿನ ಬೆಳೆ ದರವನ್ನು ನಿಯಂತ್ರಿಸಲು ದಾಸ್ತಾನು ಮಿತಿ
ಮುಕ್ತ ಮಾರುಕಟ್ಟೆಯಲ್ಲಿ ಗೋಧಿ, ತೋಗರಿ ಬೆಳೆ ಮತ್ತು ಉದ್ದಿನ ಬೆಳೆ ದರವನ್ನು ನಿಯಂತ್ರಿಸಲು ದಾಸ್ತಾನು ಮಿತಿ
Suresh19/07/2023
posted on