ಬೆಳಗಾವಿ, ಜ.೨೪ : ಸಮಾಜದಲ್ಲಿನ ಅಸ್ಪೃಶ್ಯತೆ ನಿರ್ಮೂಲನೆ ಜೊತೆಗೆ ಶಿಕ್ಷಣ ಜಾಗೃತಿಯ ವಿಶೇಷ ಘಟಕ ಯೋಜನೆಗಳು ಕುರಿತು ಸಮುದಾಯಕ್ಕೆ ಜಾಗೃತಿ ಮೂಡಿಸುವ ಸಲುವಾಗಿ ರಂಗದರ್ಶನ ಗ್ರಾಮೀಣ ವಿಕಾಸ ಸಂಘ ಧುಳಗನವಾಡಿ ಕಲಾತಂಡದವರಿಂದ ಬೀದಿ ನಾಟಕ ಏರ್ಪಡಿಸಲಾಗಿತ್ತು.
ಎಲ್ಲ ಸಮುದಾಯದವರು ಸಹೋದರತ್ವ ಭಾವನೆಯಿಂದ ಬದುಕಿದರೆ ನಾಡಿಗೆ ಹಿತವಾಗುತ್ತದೆ. ಕಲಾತ್ಮಕವಾಗಿ ಬೀದಿ ನಾಟಕದ ಮುಖಾಂತರ ಸಮುದಾಯ ಜಾಗೃತಿ ಮೂಡಿಸಲು ಕಲಾವಿದರು ಒಳ್ಳೆಯ ಪ್ರದರ್ಶನ ನೀಡಿ ಜನಸಾಮಾನ್ಯರಿಗೆ ಮನ ಮುಟ್ಟುವಂತೆ ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ಮೂಡಿಸಬೇಕೆಂದು ಬೆಳಗಾವಿ ತಾಲೂಕಾ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಆನಂದಕುಮಾರ ಆಯ್. ಪಾಟೀಲ ಇವರು ತಿಳಿಸಿದರು.
ಜಿಲ್ಲಾ ಪಂಚಾಯತ, ಸಮಾಜಕಲ್ಯಾಣ ಇಲಾಖೆ, ಹಾಗೂ ತಾಲೂಕಾ ಸಮಾಜಕಲ್ಯಾಣ ಇಲಾಖೆ ಬೆಳಗಾವಿ ಹಾಗೂ ಬೆಳಗಾವಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಇತ್ತಿಚೆಗೆ ೦೩ ದಿನಗಳ ಕಾಲ ಜರುಗಿದ ಬೀದಿ ನಾಟಕ ಕಲಾಜಾಥಾ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜಕಲ್ಯಾಣ ಇಲಾಖೆ ಕಛೇರಿ ಅದೀಕ್ಷಕರಾದ ಶ್ರೀಮತಿ ಜೆ.ಬಿ.ಗ¸,ೆ್ತ ಬಸನಗೌಡಾ ಜಿ.ಕೆ, ಹಾಗೂ ಶಿವನಗೌಡಾ ಪಾಟೀಲ ಉಪಸ್ಥಿತರಿದ್ದರು.
ಸದರಿ ಕಲಾತಂಡದವರು ಕೆ.ಕೆ ಕೊಪ್ಪ, ಹಿರೇಬಾಗೇವಾಡಿ, ಮುತ್ನಾಳ, ಬಾಳೆಕುಂದ್ರಿ ಕೆ.ಎಚ್, ಸಾಂಬ್ರಾ, ನಿಲಜಿ, ಕರಡಿಗುಡ್ಡ ಗ್ರಾಮಗಳಲ್ಲಿಯೂ ಪ್ರದರ್ಶನ ನೀಡಿ ಅರಿವು ಮೂಡಿಸಿದರು. ಎಸ್.ಎ.ಉಪ್ಪಾರ ಸ್ವಾಗತಿಸಿ ವಂದಿಸಿದರು.
Gadi Kannadiga > Local News > ಅಸ್ಪೃಶ್ಯತೆ ನಿರ್ಮೂಲನೆ ಜೊತೆಗೆ ಶಿಕ್ಷಣ ಜಾಗೃತಿ ಮೂಡಿಸಲು ಬೀದಿ ನಾಟಕ