ಬೆಳಗಾವಿ: ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕಗಳ ಮೂಲಕ ಸ್ವಯಂಸೇವಕರನ್ನು ಮೂಲಕ ಸಮಾಜದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಬಹುದಾಗಿದೆ. ಆದ್ದರಿಂದ ಎನ್‌ಎಸ್‌ಎಸ್ ಮುಖಾಂತರ ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದು ಎನ್‌ಎಸ್‌ಎಸ್ ಪ್ರಾಂತೀಯ ಕೇಂದ್ರದ ಯುವ ಅಧಿಕಾರಿಗಳು ವೈ.ಎಂ.ಉಪ್ಪಿನ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ನೇತೃತ್ವದಲ್ಲಿ ವಿವಿಯ ಕುವೆಂಪು ಸಭಾಭವನದಲ್ಲಿ ಗುರುವಾರ ಜರುಗಿದ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳು ತಮ್ಮ ಕಾಲೇಜಿನ ಘಟಕದ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಮೂಲಕ ಹಲವಾರು ಸಮಾಜ ಉಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದು. ವೃಕ್ಷಾಪರೋಹಣ, ರಕ್ತದಾನ ಶಿಬಿರ, ಸಾಕ್ಷರತೆ, ಮತದಾನ ಮತ್ತು ಪೊಲೀಯೊ ಜಾಗೃತಿ ಹೀಗೆ ಅನೇಕ ಕಾರ್ಯಕ್ರಮ ಮಾಡಲಾಗುತ್ತದೆ. ವಾರ್ಷಿಕ ಶಿಬಿರಗಳ ಮೂಲಕ ದತ್ತು ಪಡೆದ ಗ್ರಾಮದಲ್ಲಿ ಶ್ರಮದಾನದ ಜೊತೆಗೆ ವಿವಿಧ ಜಾಗೃತಿ ಕಾರ್ಯಕ್ರಮ ಆಯೋಜಿಸಿ, ಅಲ್ಲಿನ ಗ್ರಾಮಸ್ಥರಿಗೆ ಸ್ವಾವಲಂಬಿ ಮತ್ತು ಪ್ರಗತಿ ಹೊಂದಿದ ಗ್ರಾಮದ ಪರಿಕಲ್ಪನೆ ನೀಡಬೇಕು ಎಂದು ತಿಳಿಸಿದರು.
ಮುಂಬರುವ ದಿನದಲ್ಲಿ ಎನ್‌ಎಸ್‌ಎಸ್ ಎರಡು ಮುಖ್ಯ ಕಾರ್ಯಕ್ರಮಗಳು ಹಮ್ಮಿಕೊಳ್ಳಲಿದೆ. ಗ್ರಾಮಗಳಲ್ಲಿ ನೆಲೆಸಿದರು ಶಿಕ್ಷಣ ತೊರೆದ ಮತ್ತು ನಿರುದ್ಯೋಗ ಯುವಕರ ಸಮೀಕ್ಷೆ ಮಾಡುವುದು. ನನ್ನ ಹಳ್ಳಿ – ನನ್ನ ಮಣ್ಣು ಎಂಬ ಘೋಷವಾಕ್ಯದ ಅಡಿಪಾಯದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ೧೦ ಸ್ವಯಂಸೇವಕರನ್ನು ಆ ಗ್ರಾಮ ಪಂಚಾಯಿತಿಯ ಸ್ಥಳಿಯ ವಿಶೇಷತೆಗಳನ್ನು ಪ್ರಚಾರ ಗೊಳಿಸುವ ನಿಟ್ಟಿನಲ್ಲಿ ಸಿದ್ಧಪಡಿಸಿವುದು ಆಗಿದೆ. ಹಾಗಾಗಿ ಎಲ್ಲ ಕಾರ್ಯಕ್ರಮ ಆಧಿಕಾರಿಗಳು ತಮ್ಮ ವೈಯಕ್ತಿಕ ಮತ್ತು ವೃತ್ತಿ ಕಾರ್ಯಗಳ ಜೊತೆಗೆ ಎನ್‌ಎಸ್‌ಎಸ್ ಕಾರ್ಯಕ್ಕೂ ಹೆಚ್ಚು ಮಹತ್ವ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಆರ್‌ಸಿಯು ಮೌಲ್ಯಮಾಪನ ಕುಲಸಚಿವ ಪ್ರೊ. ಶಿವಾನಂದ ಗೊರನಾಳೆ ಮಾತನಾಡಿ, ಎನ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಬಹಳಷ್ಟು ಕೌಶಲಗಳಲ್ಲಿ ಪರಿಣಿತಿ ಪಡೆಯುತ್ತಾರೆ. ಅದ್ದರಿಂದ ಪಿಎಚ್.ಡಿ ಮತ್ತು ಸಂಶೋಧನೆ ಕಾರ್ಯಗಳಿಗೆ ನೀಡಿದಷ್ಟು ಮಹತ್ವ ಎನ್‌ಎಸ್‌ಎಸ್ ಘಟಕ ಮತ್ತು ಸ್ವಯಂಸೇವಕರಿಗೂ ನೀಡಬೇಕು. ಆಗ ಮಾತ್ರ ಬಹಳಷ್ಟು ಸಕಾರಾತ್ಮಕ ಬದಲಾವಣೆಗಳನ್ನು ಸಮಾಜದಲ್ಲಿ ತರಲು ಸಾಧ್ಯ ಎಂದರು.
ಆರ್‌ಸಿಯು ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಪ್ರೊ. ಕಮಾಲಾಕ್ಷಿ ತಡಸದ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌ಸಿಯು ಎನ್‌ಎಸ್‌ಎಸ್ ಅಧಿಕಾರಿ ಡಾ. ನಂದಿನ ದೇವರಮನಿ ಪ್ರಶಸ್ತಿ ಸಮಾರಂಭ ನಡೆಸಿಕೊಟ್ಟರು. ಚಿಕ್ಕೋಡಿ ಸಂಯೋಜಕರಾದ ಶಂಕರ ನಿಂಗನೂರ ಪರಿಚಯಿಸಿದರು. ವಿಜಯಪುರ ಜಿಲ್ಲೆ ಸಂಯೋಜಕ ಪ್ರಕಾಶ ರಾಥೋಡ ನಿರೂಪಿಸಿದರು. ಡಾ.ಪಿ.ನಾಗರಾಜ ವಂದಿಸಿದರು.
Gadi Kannadiga > Local News > ಎನ್‌ಎಸ್‌ಎಸ್ ಮೂಲಕ ಸಮಾಜ ಉನ್ನತಿಗೆ ಶ್ರಮಿಸಿ : ಉಪ್ಪಿನ
ಎನ್‌ಎಸ್‌ಎಸ್ ಮೂಲಕ ಸಮಾಜ ಉನ್ನತಿಗೆ ಶ್ರಮಿಸಿ : ಉಪ್ಪಿನ
Suresh18/05/2023
posted on
