ಬೆಳಗಾವಿ: ¥ದವಿ.ಪೂರ್ವ.ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಈಜು ಸ್ಪರ್ದೆಯು ಬೆಂಗಳೂರಿನಲ್ಲಿ ಇತ್ತೀಚಿಗೆ ಜರುಗಿತು. ಈ ಸ್ಪರ್ದೆಯಲ್ಲಿ ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟ್ಯಾಗೋರ ಪ.ಪೂ. ಮಹಾವಿದ್ಯಾಲದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕುಮಾರಿ. ಇಮಾನಿ ಜಾಧವ ಅದ್ವೀತೀಯ ಸಾಧನೆಗೈದು ವಿವಿಧ ವಿಭಾಗಗಳಲ್ಲಿ ಮೂರು ಬಂಗಾರದ ಪದಕ, ಎರಡು ಬೆಳ್ಳಿ ಪದಕ ಹಾಗೂ ಒಂದು ಕಂಚಿನ ಪದಕ ಪಡೆದು ಯಶಸ್ವಿ ಕ್ರೀಡಾಪಟುವಾಗಿ ಹೊರಹೊಮ್ಮಿ ನಗರದ ನಾಯ್ಕರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯಾಗಿ ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಶೀಘ್ರದಲ್ಲಿ ರಾಷ್ರö್ಟಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾಳೆ.
ಅದೇ ರೀತಿ ತಿರುವಂತಪುರಂನಲ್ಲಿ ನಡೆದ ೧೮ ವರ್ಷದ ಒಳಗಿನ “ಖೇಲೋ ಇಂಡಿಯಾ ಸ್ಪರ್ದೆ” ಯಲ್ಲಿ ೦೩ ಬಂಗಾರದ ಪದಕ, ಎರಡು ಬೆಳ್ಳಿ ಪದಕ ಪಡೆದು ೩ ನೇ ಸುತ್ತಿಗೆ ಅರ್ಹತೆ ಪಡೆದು ವiಹಾವಿದ್ಯಾಲಕ್ಕೆ ಕೀರ್ತಿ ತಂದಿದ್ದಾಳೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಿ.ಎನ್.ನಾಯ್ಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿದ್ಯಾರ್ಥಿ ಸಾಧನೆಗೆ ನಾಯ್ಕರ ಶಿಕ್ಷಣ ಸಂಸ್ಥೆಯ ಅದ್ಯಕ್ಷರಾದ ಶ್ರೀಮತಿ. ಶ್ವೇತಾ ಸಿ.ನಾಯ್ಕರ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
Gadi Kannadiga > Local News > ನಾಯ್ಕರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ರಾಷ್ರö್ಟಮಟ್ಟಕ್ಕೆ ಆಯ್ಕೆ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023