This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ  ಬೀಮ್ಸನಲ್ಲಿ ವಿದ್ಯಾರ್ಥಿ ವಕ್ಕೂಟದ ಚುನಾವಣೆ ಪಲಿತಾಂಶ ಹಿನ್ನೆಲೆ ವಸತಿ ನಿಲಯದಲ್ಲಿ ಗುಂಪು ಘರ್ಷಣೆ


ಬೆಳಗಾವಿ  ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿ ವಕ್ಕೂಟದ ಚುನಾವಣೆ ಪಲಿತಾಂಶದ ಹಿನ್ನೆಲೆ ವಿದ್ಯಾರ್ಥಿ ಗುಂಪುಗಳ ಮದ್ಯೆ   ಮೇ ,4 ರಂದು ಗುಂಪು ಘರ್ಷಣೆ ನಡೆದಿದ್ದು ಗಾಯಗೊಂಡ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರತಿವರ್ಷದಂತೆ ವಿದ್ಯಾರ್ಥಿ ವಕ್ಕೂಟದ ಚುನಾವಣೆ ನಡೆದಿದ್ದ,   ಅದರಲ್ಲಿ ಸೀನಿಯರ್ ಮತ್ತು ಜೂನಿಯರ್ ವಿದ್ಯಾರ್ಥಿಗಳ ಗುಂಪುಗಳು ಭಾಗಿಯಾಗಿದ್ದರು, ಚುನಾವಣೆ ನಂತರ ಒಂದು ಗುಂಪು ಗೆದ್ದು ಸಂಭ್ರಮಿಸಿದರೆ,  ಸೋತ ಗುಂಪಿನ ಬಗ್ಗೆ, ಗೆದ್ದವರು ಏನೋ ಅವಹೇಳನಕಾರಿ ಆಗಿ ಮಾತನಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿ ಕಾಲೇಜ್ ಹಾಸ್ಟೆಲ್ ತುಂಬಾ ಹರಿದಾಡುತ್ತಿತ್ತು.

ಈ ಗಾಳಿಸುದ್ದಿಯಿಂದ ಕುಪಿತರಾದ ಸೋತವರು, ರಾತ್ರೋರಾತ್ರಿ ಗೆದ್ದವರ ರೂಮಿಗೆ ಹೋಗಿ ಗಲಾಟೆ ಮಾಡಿಕೊಂಡಿದ್ದಾರೆ,, ಪ್ರತಿಯಾಗಿ ಇನ್ನೊಂದು ಗುಂಪು ಕೂಡಾ ಘ ಮುಂದುವರೆಸಿದ್ದು, ಹಲವಾರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ.

ಸುದ್ದಿ ತಿಳಿದ ಸ್ಥಳೀಯ ಪೊಲೀಸ್ ಸಿಬ್ಬಂದಿ, ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಚಿಕಿತ್ಸೆಗೆ ಒಳಪಡಿಸಿ, ಗಲಾಟೆಗೆ ಕಾರಣವಾದ ಕೆಲ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು ಮಾಡಿ, ಮತ್ತೆ ಕೆಲವರನ್ನು ಕಾಲೇಜ್ ನಿಂದಾ ಸಸ್ಪೆಂಡ್ ಮಾಡಿದ್ದಾಗಿ  ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಶಿವಾನಂದ ಅವರು  ಮಾತನಾಡುತ್ತಾ, ಇನ್ನು ಮುಂದೆ ಯಾವುದೇ ವಿಧ್ಯಾರ್ಥಿಗಳು ಈ ರೀತಿಯಾಗಿ ಗಲಾಟೆ, ಪುಂಡಾಟಿಕೆ ಮಾಡಬಾರದ ಹಾಗೆ ಈ ಪ್ರಕಾರದಲ್ಲಿ ಸಿಲುಕಿ ಕೊಂಡವರಿಗೆ ಬುದ್ದಿ ಕಲಿಸುತ್ತೇವೆ ಎಂದರು.


Leave a Reply