ಬೆಳಗಾವಿ:- ನಿರ್ದಿಷ್ಟ ಗುರಿ ಇದ್ದರೆ ಮಾತ್ರ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಧನೆ ಮಾಡಬಹುದು. ಯಶಸ್ಸು ಆಕಸ್ಮಿಕವಾಗಿ ಎಲ್ಲರಿಗೂ ಸಿಗುವುದಿಲ್ಲ, ದೃಡ ಸಂಕಲ್ಪ ಮತ್ತು ನಿರಂತರ ಅಧ್ಯಯನದಿಂದ ಮಾತ್ರ ಗೆಲುವು ಸಾಧ್ಯ. ಎಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿಯ ಅಪರ ಆಯುಕ್ತರಾದ ಶ್ರೀ.ರವೀಂದ್ರ ಕರಲಿಂಗನವರ ಅವರು ಹೇಳಿದರು.
ಬೆಳಗಾವಿ ನಗರದ “ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಠಾಗೋರ ಪದವಿ-ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ” ದಲ್ಲಿ ದಿನಾಂಕ ೨೧/೦೧/೨೦೨೩ ರಂದು ಹಮ್ಮಿಕೊಂಡಿದ್ದ “೨೦೨೨-೨೩ ನೇ ಸಾಲಿನ ವಾರ್ಷಿಕ ದಿನಾಚರಣೆ ಮತ್ತು ಪಾರಿತೋಷಕ ವಿತರಣಾ ಸಮಾರಂಭದ”À ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಉತ್ತಮ ಜೀವನದ ಕನಸು ಪ್ರತಿಯೊಬ್ಬರಲ್ಲೂ ಇರುತ್ತದೆ ಅದಕ್ಕೆ ತಕ್ಕಂತೆ ಸಿದ್ದತೆ ಹಾಗೂ ನಿಖರವಾದ ಗುರಿ ಹೇಗೆ ತಲುಪಬೇಕು ಎಂಬುವುದನ್ನು ಸ್ಪಷ್ಟವಾಗಿ ತಿಳಿದುಕೋಳ್ಳುವುದು ಮುಖ್ಯ. ಪರೀಕ್ಷೇಗಳು ಯುದ್ದಗಳಂತೆ ಅದನ್ನು ಗೆಲ್ಲಲು ಪೂರ್ವ ತಯಾರಿ ಅವಶ್ಯಕವಾಗಿದ್ದು ಅದರತ್ತ ಗಮನ ಕೋಡಬೆಕು. ಪ್ರತಿಯೊಬ್ಬ ವಿದ್ಯಾರ್ಥಿಯು ನಿಖರವಾದ ಮತ್ತು ಉನ್ನತ ಗುರಿಯನ್ನು ತಲುಪಲು ದೃಡವಾದ ಮನಸ್ಸಿನಿಂದ ಸಾಗಬೇಕು. ಎಂದು ವಿದ್ಯಾರ್ಥಿಗಳಿಗೆ ಸಲಹೆೆ ನೀಡಿದರು. ಪ್ರಸ್ತುತ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದೆ. ಸವಾಲಿನ ಮೆಟ್ಟಿಲುಗಳನ್ನು ಹತ್ತಿ ಗುಣಮಟ್ಟದÀ ಶಿಕ್ಷಣ ನೀಡುವಲ್ಲಿ ನಾಯ್ಕರ ಶಿಕ್ಷಣ ಸಂಸ್ಥೆ ಮಾದರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷರಾದ ಪ್ರಾಂಶುಪಾಲ ಡಾ.ಸಿ.ಎನ್.ನಾಯ್ಕರ ಅವರು ಮಾತನಾಡುತ್ತಾ, ವಿದ್ಯಾರ್ಥಿ ಜೀವನದಲ್ಲಿ ಕಷ್ಟಗಳು ಸಾಧನೆಗೆ ಅಡ್ಡಿಯಾಗಲಾರವು ಅವುಗಳನ್ನು ತೊಡೆದು ಏಳುವ ನಿರ್ದಾರ ಮಾಡಬೇಕು. ಪ್ರಯತ್ನವಿಲ್ಲದೆ ಗುರಿ ಸಿಗದು, ಸಮಸ್ಯೆಗಳು ವ್ಯಕ್ತಿಯ ಜೀವನದಲ್ಲಿ ಹೆಜ್ಜೆ ಮೂಡಿಸಿ ಹೊರಟು ಹೋಗುತ್ತವೆ. ಸಮಸ್ಯೆಗಳು ತಾತ್ಕಾಲಿಕ, ಶಾಶ್ವತವಲ್ಲ. ಧೈರ್ಯ ವಿದ್ದರೆ ಸವಾಲುಗಳು ಪರಿಹಾರವಾಗುತ್ತವೆ. ವಿದ್ಯಾರ್ಥಿಗಳು ಜೀವನದಲ್ಲಿ ಸಕಾರಾತ್ಮಕವಾಗಿ ವಿಚಾರಮಾಡಿ ಶ್ರಮಿಸಿದಾಗ ಗುರಿ ತಲುಪಲು ಸಾಧ್ಯವಾಗುತ್ತದೆ. ಸಂಸ್ಥೆಯು ಅತ್ಯುನ್ನತ ಗುರಿ ಧೇಯೋದ್ದೇಶಗಳನ್ನು ಗುರಿ ತಲುಪಲು ಅವಿರತವಾಗಿ ಶ್ರಮಿಸುತ್ತಿದೆ ಎಂದು ನುಡಿದರು.
ಪ್ರಾಸ್ತವಿಕವಾಗಿ ಮಾತನಾಡಿದ ನಾಯ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ.ಶ್ವೇತಾ ಸಿ. ನಾಯ್ಕರ ಅವರು ಮಾತನಾಡುತ್ತಾ, ಸಮಾಜದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆದರೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ನೈತಿಕತೆ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಕನಸುಗಳನ್ನು ಕಟ್ಟಿಕೊಂಡು ಆತ್ಮವಿಶ್ವಾಸದಿಂದ ಗುರಿಮುಟ್ಟಬೇಕು ಎಂದರು.
ಪ್ರಾರಂಭದಲ್ಲಿ ಶ್ರೀಮತಿ. ದೀಪಾ ಸ್ವಾಗತಿಸಿದರು. ಶ್ರೀ. ದತ್ತಾತ್ರೇಯ ಸರದೇಸಾಯಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ. ಪ್ರಿಯಾಂಕ ಪಾಟೀಲ ವರದಿ ವಾಚನ ಮಾಡಿದರು. ಕು.ಸಂಜನಾ ಪಾಟೀಲ ವಂದಿಸಿದರು. ಕು.ನೇಹಾ ಹಾಗೂ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ೨೦೨೨-೨೩ ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಎಂದು ಕುಮಾರ. ಜೀವನ ಅನಗೋಳಕರ ಮತ್ತು ಅತ್ಯುತ್ತಮ ವಿದ್ಯಾರ್ಥಿನಿ ಎಂದು ಕುಮಾರಿ. ಅಕ್ಷತಾ ಸಾಳುಂಕೆ ಅವರನ್ನು ಘೋಷಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
Gadi Kannadiga > Local News > ನಿರ್ದಿಷ್ಟ ಗುರಿ ಇದ್ದರೆ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಬಹುದು: ಕರಲಿಂಗನವರ