This is the title of the web page
This is the title of the web page

Please assign a menu to the primary menu location under menu

Local News

ಬಸ್‌ಗಾಗಿ ಸಾರಿಗೆ ನಿಯಂತ್ರಕ ಕಛೇರಿಗೆ ಬೀಗಹಾಕಿ ವಿದ್ಯಾರ್ಥಿಗಳಿಂದ ಪ್ರತಿಭಟನೆ


ಯರಗಟ್ಟಿ: ವಿದ್ಯಾರ್ಥಿಗಳು ಶಾಲೆಗೆ ತೆರಳಲು ಬಸ್ ಬಾರದೆ ೪ ಗಂಟೆಗಳ ಕಾಲ ಬಸ್ ನಿಲ್ದಾಣದಲ್ಲಿಯೇ ವಿದ್ಯಾರ್ಥಿಗಳು ಪರದಾಡಿದ ಘಟನೆಯೊಂದು ಸಮೀಪದ ಕುರುಬಗಟ್ಟಿ, ಆಲದಕಟ್ಟಿ ಕೆ.ಎಂ ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದು ತಿಂಗಳಿನಿಂದ ಸಮೀಪದ ಕುರುಬಗಟ್ಟಿ, ಆಲದಕಟ್ಟಿ ಕೆ. ಎಂ ಗ್ರಾಮಕ್ಕೆ ಬಾರದ ಬಸ್‌ಗಾಗಿ ವಿದ್ಯಾರ್ಥಿಗಳು ಯರಗಟ್ಟಿ ಸಾರಿಗೆ ನಿಯಂತ್ರಕ ಕಛೇರಿಗೆ ಬೀಗ ಹಾಕಿ ಬಸ್ ತಡೆದು ಪ್ರತಿಭಣೆ ನೆಡೆಸಿದರು. ಕೆಲಕಾಲ ಪ್ರಯಾಣಿಕರು ಪರದಾಡಿದರು.
ಈ ಕುರಿತು ಪ್ರತಿಕ, ಮಾಧ್ಯಮ ವೊಂದಕ್ಕೆ ತಮ್ಮ ಅಳಲು ತೋಡಿಕೊಂಡಿರುವ ವಿದ್ಯಾರ್ಥಿಗಳು ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಬರುತ್ತಿಲ್ಲ. ಮಳೆ ಗಾಳಿ ಅನ್ನದ ದಿನನಿತ್ಯ ೯ ಕಿ.ಮೀ. ಕಾಲ್ನಡಿಗೆಯಲ್ಲಿ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ ವಾರದ ಒಂದು ದಿನ ಮಾತ್ರ ನಮಗೆ ಸರಿಯಾದ ಸಮಯಕ್ಕೆ ಬಸ್ ದೊರೆಯುತ್ತಿದೆ ಎಂದರು ಬುಧವಾರ ಪರೀಕ್ಷೆಯಿದ್ದ ಕಾರಣ ಬೇಗನೆ ಶಾಲೆ ಸೇರಬೇಕು ಆದರೆ ಮುಂಜಾನೆ ೯ ರಿಂದ ಮಧ್ಯಹ್ನ ೧೨ ಗಂಟೆಯಾದರು.
ಯಾವುದೇ ಬಸ್ ಬಂದಿಲ್ಲ. ಈ ಅವಸ್ಥೆಯಿಂದ ತರಗತಿಯ ಪಾಠದಿಂದ ವಂಚಿತರಾಗುವ ಜೊತೆಗೆ ಹಾಜರಾತಿ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈಅವಸ್ಥೆ ಕುರಿತು ಬಸ್ ಡಿಪೋಗ ಕರೆ ಮಾಡಿದಾಗಲೆಲ್ಲ ಬಸ್ ಕೆಟ್ಟಿದೆ, ಪಂಚರ್ ಆಗಿದೆ, ಚಾಲಕರು ಬಂದಿಲ್ಲ ಎಂದು ಕುಂಟು ನೆಪ ಹೇಳುತ್ತಾರೆ ಎಂದು ಗಂಭೀರವಾಗಿ ವಿದ್ಯಾರ್ಥಿಗಳು ಆರೋಪಿಸಿದರು.
ಇದಕ್ಕೆ ಬೇಸತ್ ರೈತ ಸಂಘ, ಕರವೇ, ದಲಿತ ಸಂಘಟನೆಗಳು ಸಾರಿಗೆ ಅಧಿಕಾರಿಗಳಿಗೆ ತರಾಟಗೆ ತಗೆದುಕೊಂಡರು. ಬಡವರ, ರೈತರ, ಕೂಲಿಕಾರ್ಮಿಕ ಮಕ್ಕಳು ಎಂದರೆ ಅಧಿಕಾರಿಗಳಿಗೆ ಕಣ್ಣಿಗೆ ಕಾಣುವುದಿಲ್ಲ ನಮ್ಮ ಮಕ್ಕಳು ೦೫ ಗಂಟೆಗೆ ಮನೆಗೆ ಬರಬೇಕು ಆದರ ರಾತ್ರಿ ೦೭ ಗಂಟೆಗೆ ಮನೆಗೆ ಬರುತ್ತಿದ್ದಾರೆ ಎಂದು ವಿವಿಧ ಪರಸಂಘಟನೆಗಳು ಮುಖಂಡರು ಅಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡರು. ಪ್ರೋಪೆಸರಿ ಪಿಎಸ್‌ಐ ಬಸನಗೌಡ ನೇರ್ಲಿ, ಕುಮಾರಿ ಲಕ್ಷ್ಮೀ ಬಿರಾದಾರ ಹಾಗೂ ಎಂ. ಬಿ. ಸಣ್ಣನಾಯ್ಕರ, ಎಸ್. ಬಿ ದೊಡ್ಡವಾಡ, ಮಧ್ಯ ಪ್ರವೇಶಿ ವಿದ್ಯಾರ್ಥಿಗಳ ಹಾಗೂ ವಿವಿಧ ಪರ ಸಂಘಟನೆಗಳು ಮಖಂಡರ ಮನವಳಿಸಿ ಪ್ರತಿಭಟಣೆ ಅಂತ್ಯಗೊಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಮಲ್ಲವ್ವ ಗಿಡಗೌಡ್ರ, ಶಿಲ್ಪಾ ಉಳ್ಳೇಗಡ್ಡಿ, ಸವಿತಾ ನಾವಿ, ಮೇಘಾ ಗಿಡಗೌಡ್ರ, ವೈಶಾಲಿ ಪಾಟೀಲ, ಶಂಕರ ಸಕ್ರಿ, ಶಿವಾನಂದ ಸಕ್ರಿ, ಕಿರಣ ಮಾದರ, ಬಸವರಾಜ ಗಿಡಗೌಡ್ರ, ಹಣಮಂತ ಸೊಪ್ಪಡ್ಲ ಹಾಗೂ ವಿವಿಧ ಪರ ಸಂಘಟನೆಗಳ ಮುಖಂಡರಾದ ಸುರೇಶ ಮುರಗೋಡ, ಸೋಮು ರೈನಾಪೂರ, ಯಕ್ಕೆರಪ್ಪ ಮಾದರ, ಪ್ರಕಾಶ ನಾವಿ, ಬಾಬು ಚನ್ನಮೇತ್ರಿ, ಗಂಗಾಧರ ಬಡಿಗೇರಿ, ಫಕ್ಕೀರಪ್ಪ ಸಣ್ಣಗೌಡ್ರ, ಕೃಷ್ಣಾ ಸತ್ಯನಾಯ್ಕರ ಇತರರು ಇದ್ದರು.


Gadi Kannadiga

Leave a Reply