This is the title of the web page
This is the title of the web page

Please assign a menu to the primary menu location under menu

Local News

ವಿದ್ಯಾರ್ಥಿಗಳು ಸ್ವಂತಿಕೆಯನ್ನು ಬೆಳೆಯಿಸಿಕೊಳ್ಳಬೇಕು: ಡಾ. ಜ್ಞಾನೇಶ್ವರ


ಬೆಳಗಾವಿಯ ೧- ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಸ್ವಂತಿಕೆಯನ್ನು ಬೆಳೆಯಿಸಿಕೊಳ್ಳಬೇಕು. ಎಲ್ಲರಂತಾಗದೇ ತಮ್ಮದೇಯಾದ ವಿಶೇಷ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸ್ವಂತ ಪ್ರಯತ್ನ ಹಾಗೂ ಪರಶ್ರಮದಿಂದ ಸಾಧಿಸಿ ತಂದೆ – ತಾಯಿ, ಸಮಾಜಕ್ಕೊಂದು ಹೆಸರನ್ನು ತರುವಂತಹ ಕೆಲಸವನ್ನು ಮಾಡಬೇಕು ಎಂದು ಡಾ. ಜ್ಞಾನೇಶ್ವರ ಎನ್. ಮೋರಕರ ಇಂದಿಲ್ಲಿ ಹೇಳಿದರು.
ತಾಳೂಕರ ಸಮಾಜ ಸೇವಾ ಪ್ರತಿಷ್ಠಾನದವರು ಮೇ ದಿ. ೨೮ ರಂದು ಖಾಸಬಾಗದ ಸಾಯಿ ಭವನದಲ್ಲಿ ದೇವಾಂಗ ಸಮಾಜದ ವಿವಿಧ ಕ್ಷೇತ್ತದಲ್ಲಿ ಸಾಧ಼ನೆಗೈದವರಿಗೆ ಹಾಗೂ ಎಸ್.ಎಸ್.ಎಲ್.ಸಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಜ್ಞಾನೇಶ್ವರ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಸುಭಾಷ್ ತಾಳೂಕರ್ ಅವರು ಮಾತನಾಡಿ ವಿದ್ಯಾರ್ಥಿಗಳು ಕೀಳಿರಿಮೆಯಿಂದ ಹೊರಬಂದು ತಮ್ಮಲ್ಲಿರುವ ಎಲ್ಲ ಸಾಮರ್ಥವನ್ನು ಬಳೆಯಿಸಿಕೊಳ್ಳುವುದರ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಬರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅತಿಥಿಗಳಾಗಿ ಬಸವರಾಜ ತಹಶೀಲ್ದಾರ, ಪೊಲೀಸ್ ವೃತ್ತ ನೀರಿಕ್ಷಕರಾದ ವಿಜಯ ಸಿನ್ನೂರ, ಸಹಾಯಕ ಉಪನ್ಯಾಸಕರಾದ ಡಾ. ರಶ್ಮಿ ಸತ್ತಿಗೇರಿ, ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸಿ. ಪಿ. ಸಂಗೊಳ್ಳಿ, ಶಿಕ್ಷಕರಾದ ಸುರೇಶ ಶಿನಗಾರಿ ಆಗಮಿಸಿದ್ದರು.
ಎಂ.ಬಿ.ಬಿ.ಎಸ್. ದಲ್ಲಿ ಮೂರು ಚಿನ್ನದ ಪದಕ ಪಡೆದ ಡಾ. ಸೌಭಾಗ್ಯ ಅರ್ಜುನ ಢವಳಿ ಅಲ್ಲದೇ ಡಾ. ಅರ್ಜುನ ಢವಳಿ ಅವರನ್ನು ನೆನಪಿನ ಕಾಣಿಕೆ, ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ಪ್ರತಿಶತ ೮೦ ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅತಿಥಿಗಳು ಸನ್ಮಾನಿಸಿ ಶುಭಕೋರಿದರು
ಪುಷ್ಪಕಲಾ ನೃತ್ಯಾಲಯದ ವಿದುಷಿ ಡಾ ಡಾ. ಪೂಜಾ ನಗಳಿಕರ ಅವರ ಭರತನಾಟ್ಯದಲ್ಲಿ ಜಯಹೇ ಭಾರತ ಜನನಿ ತನುಜಾತೆ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಚಂದ್ರಗುಪ್ತ ತಾಳೂಕರ ನಿರೂಪಿಸಿದರು. ನಿರೂಪಮಾ ತಾಳೂಕರ ವಂದಿಸಿದರು.
ಪ್ರತಿಷ್ಠಾನದ ಸದಸ್ಯರುಗಳಾದ ಪುಲಿಕೇಶಿ ತಾಳೂಕರ, ರಾಘವೇಂದ್ರ ಲಕ್ಷö್ಮಣ್ ತಾಳೂಕರ, ಶ್ರೀನಿವಾಸ ಕಲ್ಯಾಣ ತಾಳೂಕರ, ಶ್ರೀಮತಿ ರತ್ನಪ್ರಭಾ ಕಾಮಕರ, ಕಾರ್ತಿಕ್ ಕಾಮಕರ , ಮಂಜುನಾಥ್ ಮಕಾಟಿ, ಸಂಜಯ್ ಹಜೇರಿ ಮುಂತಾದವರು ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು


Gadi Kannadiga

Leave a Reply