This is the title of the web page
This is the title of the web page

Please assign a menu to the primary menu location under menu

Local News

ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಗುಣವಿರಬೇಕು : ಪ್ರೊ. ಪದ್ಮಶಾಲಿ


ಬೆಳಗಾವಿ: ೨೮ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸ್ನಾತಕೋತ್ತರ ಹಾಗೂ ಸಂಶೋಧನಾರ್ಥಿಗಳಿಗೆ ಯು.ಜಿ.ಸಿ/ನೆಟ್/ಸ್ಲೆಟ್ ಹಾಗೂ ಸಿ.ಎಸ್.ಆಯ್.ಆರ್ ಪರೀಕ್ಷೆಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿಯವರು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ಕಾರ್ಯ £ರ್ವಹಿಸಲು ಕೆಲವೊಂದು ಮಾನದಂಡಗಳ ಅವಶ್ಯಕತೆಯಿದೆ. ಅವುಗಳಲ್ಲಿ ಸೆಟ್, ನೆಟ್ ಪರೀಕ್ಷೆಗಳು ಪ್ರಮುಖವಾಗಿವೆ. ವಿದ್ಯಾರ್ಥಿಗಳು ಅವುಗಳನ್ನು ಎದುರಿಸಲು ಸತತ ಪ್ರಯತ್ನ, ಶ್ರದ್ಧೆ, ಸ್ಪರ್ಧಾತ್ಮಕಗುಣ ಹಾಗೂ ನುರಿತ ಪ್ರಾಧ್ಯಾಪಕರ ಮಾರ್ಗದರ್ಶನದ ಅವಶ್ಯಕತೆಯಿದೆ. ಈ ಕಾರ್ಯಾಗಾರವು ಶ್ರೇ಼ಷ್ಠ ಸಂಪನ್ಮೂಲ ವ್ಯಕ್ತಿಗಳಿಂದ ಕೂಡಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಅಲುಮಿ£ ಆಸೋಸಿಯೇಶನ್ ತುಂಬಾ ಉಪಯುಕ್ತ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುತ್ತಿದೆ ಅದರಲ್ಲಿ ಇದು ಒಂದು ಎಂದು ಸಂತಸ ವ್ಯಕ್ತಪಡಿಸಿದರು.
ವಿಜಯಪರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಧ್ಯಾಪಕರಾದ ಡಾ. ಪ್ರಕಾಶ ಬಡೀಗೇರ ಅವರು ಕಾರ್ಯಾಗಾರದ ಕುರಿತು ಆಶಯ ನುಡಿಗಳನ್ನಾಡುತ್ತ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಲೂಮಿ£ ಅಸೋಸಿಯೇಶನ್‌ದ ಎಕ್ಸೂಕ್ಯೂಟಿವ್ ಮೆಂರ‍್ಸ್ಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಂiÀದಲ್ಲಿ ಅಧ್ಯಾಪಕರಾಗಿ ಕಾರ್ಯ£ರ್ವಹಿಸುವುದರೊಂದಿಗೆ ತಮ್ಮ ವಿದ್ಯಾರ್ಥಿಳನ್ನು ಸಮರ್ಪಕವಾದ ದಾರಿಯಲ್ಲಿ ಮುನ್ನಡೆಯುವಂತೆ ಪ್ರೋ್ರತ್ಸಾಹಿಸುತ್ತಿರುವುದು ಶ್ಲಾಘ£Ãಯ ಎಂದರು. ಈ ಅಲೂಮಿ£ ಆಸೋಸಿಯೇಶನ್ ಎಲ್ಲ ವಿಶ್ವವಿದ್ಯಾಲಯಗಳಿಗೂ ಮಾದರಿಯಾಗಿರಲಿ ಎಂದರು.
ವೇದಿಕೆಯ ಮೇಲೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಚಿಸವರಾದ ಪ್ರೊ. ವೀರನಗೌಡ ಪಾಟೀಲ ಮತ್ತು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಧಾರವಾಡದ ಇ-ಬಯೋ ಬೇಸ್ ಅಕಾಡೆಮಿಯ £ರ್ದೇಶಕರಾದ ಡಾ. ಶ್ರೀಧರ ಪತ್ತಾರ, ಅಲೂಮಿ£ ಆಸೋಸಿಯೇಶನ್ ಅಧ್ಯಕ್ಷರಾದ ಡಾ. ಮಹಾಂತೇಶ ಕುರಿ ಇದ್ದರು. ಕಾರ್ಯಾಗಾರದಲ್ಲಿ ಅಲೂಮಿ£ ಆಸೋಸಿಯೇಶನದ ಕಾರ್ಯದರ್ಶಿ ಡಾ. ಕನಕಪ್ಪಾ ಪೂಜಾರ ಹಾಗೂ ಖಜಾಂಚಿ ಡಾ. ಶೋಭಾ ನಾಯಕ ಮತ್ತು ಮಹಾವಿದ್ಯಾಲಯದ ಪ್ರಭಾರ ಪ್ರಾಚಾರ್ಯರಾದ ಆದಿನಾಥ ಉಪಾಧ್ಯೆ ಉಪಸ್ಥಿತರಿದ್ದರು. ಡಾ. ಮಹಾಂತೇಶ ಕುರಿ ಸ್ವಾಗತಿದರು. ಡಾ. ಬೇಬಿ ಸಂತಿಬಸ್ತವಾಡ ಮತ್ತು ಜ್ಯೋತಿ ಚೌಧರಿ ಪ್ರಾರ್ಥಿಸಿದರು. ಡಾ. ರಮೇಶ ಕುರಿ ವಂದಿಸಿದರು. ಡಾ ಮಂಜುಳಾ ಜಿ. ಕೆ. £ರೂಪಿಸಿದರು.
ಕಾರ್ಯಾಗಾರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಬೋಧಕ/ಬೋಧಕೇತರ ಸಿಬ್ಬಂದಿ ಹಾಗೂ ರಾಚವಿಯ ಹಳೆಯ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಪರೀಕ್ಷಾಂಕಾಕ್ಷಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply