This is the title of the web page
This is the title of the web page

Please assign a menu to the primary menu location under menu

Local News

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೋತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು: ಕಳ್ಳಿ


ಸವದತ್ತಿ: ೧೫: ಈಗಿನ ವಿದ್ಯಾರ್ಥಿಗಳು ಆಟ ಪಾಠಗಳಿಗೆ ಮಹತ್ವಕೊಡುವುದರ ಜೊತೆಗೆ ತಮ್ಮ vಮ್ಮ ಆರೋಗ್ಯದ ಕಡೆಗೂ ಗಮನವಿಟ್ಟು ಕೊಂಡು ವೇಳೆಗೆ ಸರಿಯಾಗಿ ಊಟ ನಿದ್ದೆ ಮುಂತಾದ ತಮ್ಮದೈನಂದಿನ ಚಟುವಟಿಕೆಗಳನ್ನು ವೇಳೆಗೆ ಸರಿಯಾಗಿ ಮಾಡಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೋತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕುಮಾರೇಶ್ವರ ಕಾಲೇಜಿನ ಪ್ರಾಚಾರ್ಯ ಎನ್ ಎಲ್ ಕಳ್ಳಿ, ಮಾತನಾಡಿದರು
ಅವರು ಸ್ಥಳೀಯ ಕುಮಾರೇಶ್ವರ ಆಂಗ್ಲಮಾಧ್ಯ ಪ್ರೌಢಶಾಲೆಯಲ್ಲಿ ಡಾಕ್ಟರ ಕಬ್ಬುರ ವiಲ್ಟಿ ಸ್ಪೇಶಾಲಿಟಿ ಡೆಂಟಲ್ ಕ್ಲಿನಿಕ ಸವದತ್ತಿ. ಹಾಗೂ ಜೈಂಟ್ಸ ಗ್ರುಪ್ ಆಪ್ ಸವದತ್ತಿ ಹಾಗೂ ಮರಾಠ ಮಂಡಲ ಎನ್ ಜಿ ಎಚ್ ಡೆಂಟಲ್ ಕಾಲೇಜು ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶಾಲಾ ಮಕ್ಕಳಿಗೆ ಉಚಿತ ದಂತ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು
ಡಾಕ್ಟರ ಅಯ್ಯನಗೌಡ ಕಬ್ಬುರ ಮಕ್ಕಳು ದಂತಗಳನ್ನು ಯಾವರಿತಿ ಸ್ವಚ್ಚತೆ ಮಾಡಿಕೊಳ್ಳಬೆಕು ಎಂಬುವುದರಬಗ್ಗೆ ಮಕ್ಕಳಿಗೆ ಮಾಹಿತಿ ನಿಡಿದರು ಜೈಂಟ್ಸಗ್ರುಪನ ಅದ್ಯಕ್ಷ ಯಶ್ವಂತ ಪಾಸ್ತೆ ಸಸಿಗೆ ನೀರು ಹಾಕುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು
ಮುಖ್ಯ ಅಥಿತಿಗಳಾಗಿ ಗಣ್ಯರಾದ ಜಗದೀಶ ಹಂಪಣ್ಣವರ, ನ್ಯಾಯವಾದಿಗಳಾದ ಎಮ ಎಮ್ ಎಲಿಗಾರ, ಡಾಕ್ಟರ ಹೇಮಂತ ಭಸ್ಮೇ. ಮಯೂರ ಕಾರದಗಿ, ಬೆಳಗಾವಿಯ ಡಾ ಪಲ್ಲವಿ ಗೋಪಶೇಟ್ಟಿ, ಡಾ, ರೇಖಾ ಕಟ್ಟಿ, ಡಾ, ವಿಲಾಸ ಪತ್ತಾರ, ಮತ್ತು ಸೇರಿದಂತೆ ಕುಮಾರೇಶ್ವರ ಪ್ರೌಢಶಾಲೆಯ ಶಿಬ್ಬಂದಿಗಳು ಉಪಸ್ಥಿತರಿದ್ದರು ನಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರ ದಂತ ತಪಾಸಣೆ ಮಾಡಿ ಸೂಕ್ತ ಸಲಹೆಗಳನ್ನು ನಿಡಲಾಯಿತು ನಂತರ ವಿದ್ಯಾರ್ಥಿಗಳಿಗೆ ಡಾಕ್ಟರ ಕಬ್ಬುರ ಕ್ಲಿನಿಕ್ ವತಿಯಿಂದ ಪೇಸ್ಟ ಹಾಗೂ ಬ್ರೇಶ್ ಗಳನ್ನು ವಿತರಿಸಲಾಯಿತು


Gadi Kannadiga

Leave a Reply