This is the title of the web page
This is the title of the web page

Please assign a menu to the primary menu location under menu

Local News

ಉಪಗ್ರಹ ಕುರಿತು ಅಧ್ಯಯನ ಮತ್ತು ಜ್ಞಾನ ಅವಶ್ಯಕ : ದೀಪಕ ಧಡೂತಿ


ಬೆಳಗಾವಿ.ಸೆ.೨೧: ವಿಶ್ವದಲ್ಲಿನ ಮುಂದುವರೆದೆ ರಾಷ್ಟ್ರಗಳಲ್ಲಿ ತಂತ್ರಜ್ಞಾನ ಅತಿ ವೇಗವಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಭಾರತ ದೇಶವೂ ಸಹ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸ್ಥಾನ ಮಾನ ಹೊಂದಿದೆ. ಮುಂಬರುವ ಸ್ಫರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಪಗ್ರಹದ ಕುರಿತು ಅಧ್ಯಯನ ಮಾಡುವುದು ಮತ್ತು ಅದರ ಜ್ಞಾನ ಹೊಂದುವುದು ಅತೀ ಅವಶ್ಯಕವಾಗಿದೆ ಎಂದು ಸರ್ವೋ ಕಂಟ್ರೋಲ್ಸ ಎರೋಸ್ಪೇಸ ಇಂಡಿಯಾ ಪ್ರೆöÊ.ಲಿ. ನ ವ್ಯವಸ್ಥಾಪಕ ನಿರ್ದೇಶಕರಾದ ದೀಪಕ ಧಡೂತಿ ಅವರು ಇಂದಿಲ್ಲಿ ಹೇಳಿದರು.
ಬುಧವಾರದಂದು ಭರತೇಶ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವ ವರ್ಷದ ಆಚರಣೆ ಅಂಗವಾಗಿ ಭರತೇಶ ಶಿಕ್ಷಣ ಸಂಸ್ಥೆಯ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ನಿಕ ಮಹಾವಿದ್ಯಾಲಯಕ್ಕೆ ೨೫ ಲಕ್ಷ ರೂ. ಮೌಲ್ಯದ ಚಿಕ್ಕ ಉಪಗ್ರಹವನ್ನು (ನ್ಯಾನೋಸೆಟ್‌ಲೈಟ್) ಕೊಡುಗೆಯಾಗಿ ನೀಡಿದ ದೀಪಕ ಧಡೂತಿ ಅವರು ಉಪಗ್ರಹ ಪ್ರಯೋಗಾಲವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಸೆಟಲೈಟ ಪ್ರಯೋಗಾಲಯವನ್ನು ಹೊಂದಿದ ರಾಜ್ಯದ ಪ್ರಥಮ ಪಾಲಿಟೆಕ್ನಿಕ್ ಮಹಾವಿದ್ಯಾಲವಾಗಿದ್ದು ಪಾಲಿಟೆಕ್ನಿಕ್ನ,ಇಲೆಕ್ಟಾö್ರನಿಕ್ಸ ಮತ್ತು ಕಮ್ಯುನಿಕೇಷನ್, ಇಲೆಕ್ಟಿö್ರಕಲ ಮತ್ತು ಇಲೆಕ್ಟಾö್ರನಿಕ್ಸ, ಕಂಪ್ಯೂಟರ್ ಸಾಯನ್ಸ, ಮೆಕ್ಯಾನಿಕಲ್ ಮತ್ತು ಮೆಕ್ಯಾಟ್ರಾನಿಕ್ಸ ವಿಭಾಗದ ವಿದ್ಯಾರ್ಥಿಗಳಿಗೆ ಉಪಗ್ರಹದ ತಯಾರಿಕೆ, ನಿಯಂತ್ರಣ ಮುಂತಾದ ವಿಷಯಗಳ ಕುರಿತು ಅಧ್ಯಯನ ಮಾಡಲು ಉಪಯುಕ್ತವಾಗಿದೆ. ಇದಲ್ಲದೆ ಉಪಗ್ರಹ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಚಿಕ್ಕ ಉಪಗ್ರಹದ ಮೂಲಕ ಉಪಗ್ರಹ ತಯಾರಿಕೆ, ನಿಯಂತ್ರಣ ಸೇರಿದಂತೆ ಇನ್ನಿತರ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಹೊಂದಲು ಅನಕೂಲವಾಗುತ್ತದೆ. ಅಲ್ಲದೆ ತರಬೇತಿಗಾಗಿ ಬೇಕಾದ ನುರಿತ ಅನುಭವಿ ತಂತ್ರಜ್ಞಾನಿ ಮತ್ತು ಪರಿಣಿತರನ್ನು ತಮ್ಮ ಸಂಸ್ಥೆಯ ವತಿಯಿಂದ ನೀಡುವುದಾಗಿ ಅವರು ತಿಳಿಸಿದರು.
ಉದ್ಘಾಟಣೆಯ ನಂತರ ಭರತೇಶ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸಕ ಮಾಲಿಕೆಯ ಮೊದಲನೆ ಉಪನ್ಯಾಸವನ್ನು ಉದ್ಯಮಶೀಲತೆ ಮತ್ತು ಪ್ರಾರಂಭ ವಿಷಯ ಕುರಿತು ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ವಜ್ರ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ರಾಜೀವ ದೊಡ್ಡಣವರ ಅವರು ಮಾತನಾಡಿ ,ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಉಪಗ್ರಹವನ್ನು ದಾನವಾಗಿ ನೀಡಿ ಪ್ರಯೋಗಾಲಯವನ್ನು ಸ್ಥಾಪಿಸಲು ಕಾರಣಿಭೂತರಾದ ದೀಪಕ ಧಡೂತಿ ಹಾಗೂ ಅವರ ಕುಟುಂಬದವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಸಮಾರಂಭದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಪಾಲ ಖೇಮಲಾಪೂರೆ, ಪಾಲಿಟೆಕ್ನಿಕ್ನ ತಾಂತ್ರಿಕ ಸಲಹಾ ಮಂಡಳಿಯ ಚೇರಮನರಾದ ಅಶೋಕ ದಾನವಾಡೆ , ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ತಾಂತ್ರಿಕ ಸಲಹಾ ಮಂಡಳಿಯ ಸದಸ್ಯರು, ಮತ್ತು ಪ್ರಾಚಾರ್ಯ ಬಿ.ಎಂ.ಬಿ.ಪಾಟೀಲ, ಟೆಕ್ನಿಕಲ್ ಡೈರೆಕ್ಟರ್ ಶ್ರೀ.ಎಸ. ಎನ್.ತುಳಸಿಗೇರಿ, ಮತ್ತು ಇಲೆಕ್ಟಾö್ರನಿಕ್ಸ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರಾದ ಸೋಮಶೇಖರ ಅಂಬವ್ವಗೋಳ ಮತ್ತು ಪಾಲಿಟೆಕ್ನಿಕ್‌ನ ಎಲ್ಲ ಉಪನ್ಯಾಸಕ ವರ್ಗ ಮತು ್ತವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply