This is the title of the web page
This is the title of the web page

Please assign a menu to the primary menu location under menu

Local News

ಸುಬೇದಾರ್ ಸುರ್ಜೀತ್ ಸಿಂಗ್ ನಾಪತ್ತೆ: ಮಾಹಿತಿ ನೀಡಿದವರಿಗೆ ೫೦ ಸಾವಿರ ನಗದು


ಬೆಳಗಾವಿ,ಜೂನ್೧೪: ಬೆಳಗಾವಿ ಕಮಾಂಡೋ ವಿಂಗ್‌ನಲ್ಲಿ ಇನ್‌ಸ್ಟ್ರಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ೪೭ ವರ್ಷದ ಸುಬೇದಾರ್ ಮೇಜರ್ ಸುರ್ಜೀತ್ ಸಿಂಗ್ ಜೂನ್ ೧೨ ೨೦೨೨ ರಂದು ಏಕಾ ಏಕಿ ನಾಪತ್ತೆಯಾಗಿದ್ದಾರೆ.
ಪಂಜಾಬ್‌ನ ಗುರುದಾಸಪುರದ ನಿವಾಸಿಯಾಗಿರುವ ಸುಬೇದಾರ್ ಮೇಜರ್ ಸುರ್ಜೀತ್ ಸಿಂಗ್ ಅವರು ಜೂನ್ ೧೨ ರಂದು ೬ ಗಂಟೆ ಸುಮಾರಿಗೆ ಬೆಳಗಾವಿಯ ಕ್ಯಾಂಪ್ ಪ್ರದೇಶದಿಂದ ಯಾವ ಅಧಿಕಾರಿ, ಸಿಬ್ಬಂದಿಗೂ ಹೇಳದೇ ಎಲ್ಲಿಗೋ ಹೋಗಿ ನಾಪತ್ತೆಯಾಗಿದ್ದಾರೆ.
ಸುರ್ಜೀತ್ ಸಿಂಗ್ ನಾಪತ್ತೆಯಾಗಿರುವ ಬಗ್ಗೆ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇವರ ಬಗ್ಗೆ ಮಾಹಿತಿ ನೀಡಿದವರಿಗೆ ೫೦ ಸಾವಿರ ನಗದು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೫೯೬೯೧೫೫೫೫, ೯೯೦೬೧೭೬೦೬೦, ೭೦೪೨೮೬೯೨೩೫ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Gadi Kannadiga

Leave a Reply