This is the title of the web page
This is the title of the web page

Please assign a menu to the primary menu location under menu

State

ಸುಭಿಕ್ಷಾ ಕಾಂಬಳೆ ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ


ಹುಬ್ಬಳ್ಳಿ: ಜಿಲ್ಲಾ ಪಂಚಾಯತ ಧಾರವಾಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಧಾರವಾಡ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈರಿದೇವರಕೊಪ್ಪ ಹಾಗೂ ಶ್ರೀ ಜಗದ್ಗುರು ಸದಾಶಿವಾನಂದ ಆಂಗ್ಲ ಮಾಧ್ಯಮ ಶಾಲೆ, ಬೈರಿದೇವರಕೊಪ್ಪ ಇವರ ಸಂಯುಕ್ತಾಶ್ರಯದಲ್ಲಿ ೧೩ ಮತ್ತು ೧೪ ಸೆಪ್ಟೆಂಬರ್ ೨೦೨೨ ರಂದು ನಡೆದ ಬೈರಿದೇವರಕೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಚರ್ಚಾಸ್ಪರ್ಧೆಯಲ್ಲಿ ಬೈರಿದೇವರಕೊಪ್ಪದ ಗುರು ಮಹಾವಿದ್ಯಾಪೀಠ ಪಬ್ಲಿಕ್ ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಸುಭಿಕ್ಷಾ ಕಾಂಬಳೆ ಅವರು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಸುಭಿಕ್ಷಾ ಕಾಂಬಳೆ ಅವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.

ಸುಭಿಕ್ಷಾ ಕಾಂಬಳೆಯ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ತಂದೆ ಪ್ರಕಾಶ್ ಕಾಂಬಳೆ, ತಾಯಿ ಅಕ್ಷತಾ ಕಾಂಬಳೆ ಹಾಗೂ ಊರಿನ ಗುರು ಹಿರಿಯರು ಅಭಿನಂದಿಸಿದ್ದಾರೆ.


Gadi Kannadiga

Leave a Reply