ಕೊಪ್ಪಳ ಮಾರ್ಚ್ 27:- ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಮಾರ್ಚ್ 26 ರಂದು ವಿಶ್ವಕರ್ಮ ದೇವರ ದಾಸಿಮಯ್ಯನವರಿಗೆ ಪುಷ್ಪನಮನ ಸಲ್ಲಿಸಲಾಯಿತು.
ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರದಂದು ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ದೇವರ ದಾಸಿಮಯ್ಯರ ಭಾವಚಿತ್ರಕ್ಕೆ ಪುಷ್ಪಾರ್ಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಪರಶುರಾಬ ಬಿ ತುಗ್ಲಿ, ಲಕ್ಷ್ಮೀಕಾಂತ ಎಸ್ ಕಂಟ್ಲಿ, ಸುರೇಶ ಕೆ ಬಣ್ಣದ, ಉಮೇಶ ಜಾಯಿಕಾಯಿ, ರವಿ ಬಂಡಿ, ಈರಣ್ಣ ಪರಗಿ, ವಿರುಪನಗೌಡ ಸ್ವಾಗಿ, ಗುರುರಾಜ ಏಣಿ, ಮೌನೇಶ ನಾಗಶೆಟ್ಟಿ, ಮೌನೇಶ ಬಾವಿ, ಹನುಮಂತ ಬಾವಿ, ರಾಘ ಕೋಡಾಲ, ರಾಂಘವೇಂದ್ರ ಪರಿಮಳದ, ಶಿವು ಜೂಂಜಾ ಸೇರಿದಂತೆ ಹಲವು ಗಣ್ಯರು, ಜಿಲ್ಲಾಧಿಕಾರಿ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ