ಕೊಪ್ಪಳ ಮಾರ್ಚ್ ೨೭ : ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಮಾರ್ಚ್ ೨೬ ರಂದು ವಿಶ್ವಕರ್ಮ ದೇವರ ದಾಸಿಮಯ್ಯನವರಿಗೆ ಪುಷ್ಪನಮನ ಸಲ್ಲಿಸಲಾಯಿತು.
ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರದಂದು ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ದೇವರ ದಾಸಿಮಯ್ಯರ ಭಾವಚಿತ್ರಕ್ಕೆ ಪುಷ್ಪಾರ್ಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಪರಶುರಾಬ ಬಿ ತುಗ್ಲಿ, ಲಕ್ಷ್ಮೀಕಾಂತ ಎಸ್ ಕಂಟ್ಲಿ, ಸುರೇಶ ಕೆ ಬಣ್ಣದ, ಉಮೇಶ ಜಾಯಿಕಾಯಿ, ರವಿ ಬಂಡಿ, ಈರಣ್ಣ ಪರಗಿ, ವಿರುಪನಗೌಡ ಸ್ವಾಗಿ, ಗುರುರಾಜ ಏಣಿ, ಮೌನೇಶ ನಾಗಶೆಟ್ಟಿ, ಮೌನೇಶ ಬಾವಿ, ಹನುಮಂತ ಬಾವಿ, ರಾಘ ಕೋಡಾಲ, ರಾಂಘವೇಂದ್ರ ಪರಿಮಳದ, ಶಿವು ಜೂಂಜಾ ಸೇರಿದಂತೆ ಹಲವು ಗಣ್ಯರು, ಜಿಲ್ಲಾಧಿಕಾರಿ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
Gadi Kannadiga > State > ದೇವರ ದಾಸಿಮಯ್ಯ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪನಮನ ಸಲ್ಲಿಕೆೆ
ದೇವರ ದಾಸಿಮಯ್ಯ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪನಮನ ಸಲ್ಲಿಕೆೆ
Suresh27/03/2023
posted on

More important news
ಬೀಟ್ ಮೀಟಿಂಗ್
29/05/2023
ಸಚಿವ ಎಚ್.ಕೆ.ಪಾಟೀಲ ಅವರ ಜಿಲ್ಲಾ ಪ್ರವಾಸ
29/05/2023
ಶ್ರೀ ಯಾಜ್ಞವಲ್ಕö್ಯ ಗುರುಗಳ ಜಯಂತಿ
29/05/2023
ಅಧಿಕಾರ ಸ್ವೀಕಾರ
29/05/2023