ಮಾಡುವ ಕೆಲಸದ ಮೇಲೆ ಶ್ರದ್ದೆ ಇದ್ದರೆ ಯಶಸ್ಸು ಖಂಡಿತ:ಶಾಸ್ತ್ರಿ

Prasanna Kumbar
WhatsApp Group Join Now

ಗಡಿ ಕನ್ನಡಿಗ ಸುದ್ದಿ

ಖಾನಾಪುರ:ಪತ್ರಕರ್ತರು ತಾವು ಮಾಡುವ ಕೆಲಸದ ಮೇಲೆ ಶ್ರದ್ದೆ ನಿಷ್ಟೆ ಇದ್ದರೆ ಯಶಸ್ಸು ಖಂಡಿತ ಎಂದು ಜಿಲ್ಲೆಯ ಹಿರಿಯ ಪತ್ರಕರ್ತ ಎಲ್.ಎಸ್ ಶಾಸ್ತ್ರೀ ಅಭಿಪ್ರಾಯಪಟ್ಟರು.

ಪಟ್ಟಣದ ಶಿವ ಸ್ಮಾರಕದಲ್ಲಿ ಕರ್ನಾಟಕ ಪತ್ರಕರ್ತರ ಸಂಘ (ರಿ) ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಮದಲ್ಲಿ ಮಾತನಾಡಿದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕ ಪಡೆದ ಸರಕಾರಿ ಶಾಲೆ ಮಕ್ಕಳಿಗೆ ಪುರಸ್ಕಾರ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಪತ್ರಿಕೋದ್ಯಮ ಪ್ರಾರಂಭವಾಗಿ 182 ವರ್ಷದ ಇತಿಹಾಸವಿದೆ ಪತ್ರಕರ್ತರದ್ದು ಸವಾಲಿನ ಕೆಲಸ ಅದನ್ನ ಶ್ರಧ್ದೆಯಿಂದ ಮಾಡಿದರೆ ಮಾತ್ರ ಯಶಸ್ಸು ದೊರಕಲು ಸಾಧ್ಯ ಎಂದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಮುರಗೇಶ ಶಿವಪೂಜಿ ಸಂಘಟನೆ ನಡೆದು ಬಂದ ಹಾದಿ ಮತ್ತು ಉದ್ದೇಶಗಳನ್ನ ವಿವರಿಸಿದರು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಬಿಜೆಪಿ ಗ್ರಾಮೀಣ ಉಪಾದ್ಯಕ್ಷ ಪ್ರಮೋದ ಕೊಚೇರಿ ಹಾಗೂ ಹಿಂದೂ ಮುಖಂಡ ಪಂಡಿತ ಓಗಲೆ ಮಾತನಾಡಿ ಖಾನಾಪುರ ತಾಲೂಕು ಭೌಗೋಳಿಕವಾಗಿ ಬಹುದೊಡ್ಡ ತಾಲೂಕು ಇಲ್ಲಿ ಪತ್ರಕರ್ತರಾಗಿ ಕೆಲಸ ನಿರ್ವಹಿಸುವದು ಸವಾಲಿನ ಕೆಲಸ ಅದರಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಇನ್ನೂ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಅವರೊಳ್ಳಿ ಬಿಳಕಿ ಮಠದ ಶ್ರೀ ಚನ್ನಬಸವ ದೇವರು ಮಾತನಾಡಿ ಮಾದ್ಯಮಗಳು ಸಮಾಜನ್ನ ಬೆಸೆಯುವ ಕೆಲಸದ ಜೊತೆ ಸಮಾಜದ ಅಂಕುಡೊಂಕುಗಳನ್ನ ಮಾಡಬೇಕು ಆಗ ಮಾತ್ರ ಸಮಾಜ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯ ಅಲ್ಲದೇ ಖಾನಾಪುರ ತಾಲೂಕು ಸಂಪದ್ಭರಿತವಾದ ತಾಲೂಕು ಆದರೆ ಇಲ್ಲಿ ಅಭಿವೃದ್ದಿ ಅಷ್ಟಕಷ್ಟೆ ಆದರೆ ಕರ್ನಾಟಕ ಪತ್ರಕರ್ತರ ಸಂಘವು ಇದರ ಬಗ್ಗೆ ಬೆಳಕು ಚೆಲ್ಲಿ ತಾಲೂಕಿನ ಅಭಿವೃದ್ದಿಗೆ ಮುನ್ನುಡಿ ಬರೆಯಲಿ ಎಂದು ಆಶಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಖಾನಾಪುರ ಪಟ್ಟಣ ಪಂಚಾಯತ ಅಧ್ಯಕ್ಷೆ ಮೀನಾಕ್ಷಿ ಬೈಲೂರಕರ,ಜೆಡಿಎಸ್ ಮಹಿಳಾ ಜಿಲ್ಲಾದ್ಯಕ್ಷೆ ಮೇಘಾ ಕುಂದರಗಿ,ಕಾಂಗ್ರೆಸ್ ಮಹಿಳಾ ರಾಜ್ಯ ಕಾರ್ಯದರ್ಶಿ ಭಾರತಿ ಪಾಟೀಲ್, ಬಿಜೆಪಿ ಗ್ರಾಮೀಣ ಉಪಾಧ್ಯಕ್ಷ ಪ್ರಮೋದ ಕೊಚೆರಿ,ಬಿಜೆಪಿ ಮಹಿಳಾ  ಕಾರ್ಯದರ್ಶಿ ಧನಶ್ರಿ ಸರದೇಸಾಯಿ,ರೈತ ಮುಖಂಡ ರುದ್ರಗೌಡ ಪಾಟೀಲ್, ಹಿಂದೂ ಮುಖಂಡ ಪಂಡಿತ್ ಓಗಲೆ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅದ್ಯಕ್ಷ ಪ್ರಸನ್ನ ಕುಂಬಾರ ಸದಸ್ಯರಾದ ನಾಗೇಶ ನಾಯ್ಕರ,ಪರಶುರಾಮ ತಳವಾರ,ನಾಗೇಂದ್ರ ಸೋನವಾಲ್ಕರ,ವಿಜಯ ಕೊಲಕಾರ,ಜಾವೇದ ಮೊಕಾಶಿ ಹಾಗೂ ವಿವಿಧ ಕನ್ನಡಪರ,ದಲಿತ ಮತ್ತು ಹಿಂದೂ ಸಂಘಟನೆಗಳು ಭಾಗವಹಿಸಿದ್ದವು. ಕಾರ್ಯಕ್ರಮವನ್ನ ನಾಗೇಂದ್ರ ಚೌಗಲಾ ನಿರೂಪಿಸಿದರು ಪರಶುರಾಮ ಮಾದರ ವಂದಿಸಿದರು

WhatsApp Group Join Now
Telegram Group Join Now
Share This Article
error: Content is protected !!