This is the title of the web page
This is the title of the web page

Please assign a menu to the primary menu location under menu

State

ಸತತ ಅಭ್ಯಾಸದಿಂದ ಯಶಸ್ಸು ಹೊಂದಲು ಸಾಧ್ಯ: ಪ್ರಕಾಶ ಮೇಟಿ


ಗದಗ ಸೆಪ್ಟೆಂಬರ್ ೧೪: ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ಏರುಪೇರುಗಳು ಬರುತ್ತವೆ. ಸ್ಪರ್ಧಾತ್ಮಕವಾಗಿ ಬೆಳೆಯುತ್ತಿರುವ ಈ ದಿನಗಳಲ್ಲಿ ಸತತ ಅಭ್ಯಾಸದಿಂದ ಯಶಸ್ಮ್ಸ ಹೊಂದಲು ಸಾಧ್ಯ ಎಚಿದು ಪತ್ರಕರ್ತರ ಹಾಗೂ ಶಿP್ಪ್ಷಣ ಪ್ರೇಮಿಗಳಾದ ಪ್ರಕಾಶ ಮೇಟಿಯವರು ಹೇಳಿದರು.
ಶಿರಹಟ್ಟಿಯ ಎಫ್.ಬಿ. ಪೂಜಾರ ಸರಕಾರಿ ಪದವಿ ಪೂರ್ವ ಕಾಲೇಜ್‌ದಲ್ಲಿ ಸಾಂಘಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭೂದಾನಿಗಳಾದ ಪರಸಪ್ಪ ಪೂಜಾರ ಆಗಮಿಸಿದ್ದರು. ಪ್ರಾಚಾರ್ಯ ಬಿ.ಜಿ. ಗಿರಿತಿಮ್ಮಣ್ಣವರ ಅವರು ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಶಿಕ್ಷಕ ದಿನಾಚರಣೆ ಹಾಗೂ ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಕೀರಹುಸೇನ ಮುಜಾವರ, ರಾಜೇಶ್ವರಿ ಸಂಶಿ,ಕೊಟ್ರಯ್ಯ , ನದಾಫ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಮಾರಂಭದಲ್ಲಿ ದಿ. ಬಿ.ವಿ.ಸಜ್ಜನರ ಅವರ ನೆನಪಿಗಾಗಿ ಅನೂಪ ಸಜ್ಜನರ ಅವರು ಕೊಡಮಾಡಿದ ಸ್ಕೂಲ್ ಬ್ಯಾಗ್ ಗಳನ್ನು ಬಡ & ಜಾಣ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಅತ್ಯುತ್ತಮ ಕೊಠಡಿ ನಿರ್ವಹಣೆಗಾಗಿ ಪ್ರಕಾಶ ಮೇಟಿಯವರು ರೂ.೨,೦೦೦/- ಮೊತ್ತದ ವಿಷಯ ಚಾರ್ಟಗಳನ್ನು ಬಹುಮಾನವಾಗಿ ವಿತರಿಸಿದರು. ಕು. ಸುಪ್ರಿಯಾ ಹಾಗೂ ಕು. ಪ್ರಜ್ವಲ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಕು. ದೇವರಾಜ ಸ್ವಾಗತಿಸಿದರು. ಕು. ಸಿಂಧು ಈಳಗೇರ ವಂದಿಸಿದರು. ಕಾರ್ಯಕ್ರಮದ ಮುನ್ನಾದಿನ ಪ್ರಾಚಾರ್ಯರು ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಕೊಠಡಿ ನಿರ್ವಹಣಾ ಸ್ಪರ್ಧೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರೂ.೧,೦೦೦/- ಬಹುಮಾನ ಪಡೆದರೆ ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕ್ರ ಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಶ್ರೀಮತಿ ಮಂಜುಳಾ ಹಾಗೂ ಚಿನ್ಮಯಿ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.


Gadi Kannadiga

Leave a Reply