This is the title of the web page
This is the title of the web page

Please assign a menu to the primary menu location under menu

Local News

ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ


ಬೆಳಗಾವಿ .ಜುಲೈ.೧೨: ವಿದ್ಯಾರ್ಥಿಗಳು ಇಗಿನಿಂದಲೇ ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮ ಮಾಡುವುದನ್ನು ರೂಢಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ರೋಟೆರಿಯನ್ ಬೆಲಗಾಂ ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ಅವಿನಾಶ ಪೋತದಾರ ಅವರು ಹೇಳಿದರು.
ಇತ್ತಿಚಿಗೆ ಭರತೇಶ ಪಿಯು ಕಾಲೇಜಿನ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ “ ಆರಂಭ” ಕಾರ್ಯಕ್ರವಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಎ.ಪಿ.ಜೆ.ಅಬ್ದುಲ ಕಲಾಂ, ಸಚಿನ ತೆಂಡೂಲಕರ, ನಾರಾಯಣಮೂರ್ತಿ ಇವರೆಲ್ಲರೂ ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮ ಮಾಡಿದ್ದರಿಂದಲೇ ಇಂದು ಅವರು ಸಮಾಜದ ಉನ್ನತ ಸ್ಥಾನಕ್ಕೇರಿದ್ದಾರೆ. ಅವರ ಸಾಧನೆಗಳು ನಿಮಗೆ ಮಾರ್ಗದರ್ಶಕವಾಗಬೇಕೆಂದು ಅವರು ಹೇಳಿದರು.
ಸಮಾರಂಭದಲ್ಲಿ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ತಿಕ ಸುರೇಕರ ಪ್ರಧಾನ ಕಾರ್ಯದರ್ಶಿ ಮತ್ತು ಭೂಮಿ ಜಕ್ಕನ್ನವರ ವಿದ್ಯಾರ್ಥಿನಿ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರು ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪೂರೆ ಆಡಳಿತ ಮಂಡಳಿಯ ಸದಸ್ಯ ಹೀರಾಚಂದ ಕಲಮನಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಾಚರ್ಯ ಸುನಿತಾ ದೇಶಪಾಂಡೆ ಅತಿಥಿಗಳನ್ನು ಸ್ವಾಗತಿಸಿದರು. ಶೃತಿ ಭುರಾಣಿ ಪರಿಚಯಿಸಿದರು. ಪ್ರವೀಣ ಹರಿಜನ ವಂದಿಸಿದರು. ಭೂಮಿ ಜಕ್ಕನ್ನವರ ಮತ್ತು ಗಿರಿಧರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.


Leave a Reply