ಕೊಪ್ಪಳ ಫೆಬ್ರವರಿ ೦೨ : ನಗರದ ದಿಡ್ಡಿಕೆರೆ ಓಣಿಯ ಮೌಲಾನ ಆಜಾದ್ ಮಾಡೆಲ್ ಹೈ ಸ್ಕೂಲ್ ನಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಕಾನೂನು ಕಾರ್ಯಗಾರ ಯಶಸ್ವಿಯಾಗಿ ಜರುಗಿತು.
ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈಲ್ಡ್ ಸಪೋರ್ಟ್ ಫೌಂಡೇಶನ್ ಮತ್ತು ಧ್ವನಿ ಸ್ವಯಂ ಸೇವಾ ಸಂಸ್ಥೆ, ಸಖಿ-ಒನ್ ಸ್ಟಾಪ್ ಸೆಂಟರ್ ಹಾಗೂ ದಿಡ್ಡಿಕೆರೆ ಓಣಿಯ ಮೌಲಾನ ಆಜಾದ್ ಮಾಡೆಲ್ ಹೈ ಸ್ಕೂಲ್ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯರುಗಳಿಗೆ “ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಕಾನೂನು’’ ಕುರಿತಾದ ಒಂದು ದಿನದ ಮಾಹಿತಿ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳು ನಾವಿನ್ಯತೆಯ ಚಟುವಟಿಕೆಗಳನ್ನು ಭಾಗವಹಿಸುವುದರ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಚರ್ಚೆ, ಸಂವಾದ, ವಿಷಯ ಮಂಡನೆಗಳಲ್ಲಿ ವಾಸ್ತವಿಕ ಚಿಂತನೆಗಳಲ್ಲಿ ಮಂಡಿಸಿದರು.
ಶಾಲಾ ಪ್ರಭಾರಿ ಮುಖ್ಯೋಪಾಧ್ಯಾಯರಾದ ಫಾತಿಮಾ ಎಸ್ ವರಡಿ ಅವರು ಮಾತನಾಡಿ, ಮಕ್ಕಳ ಕಲಿಕೆಗೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯವೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಸಖಿ ಘಟಕದ ಆಡಳಿತಾಧಿಕಾರಿ ಯಮುನಾ ಬೆಸ್ತರ್ ಅವರು ಮಾತನಾಡಿ, ಇಂದಿನ ಮಕ್ಕಳು ಇಂದಿನ ಪ್ರಜೆಗಳು ಮಕ್ಕಳ ಹಕ್ಕುಗಳ ಒಡಂಬಡಿಕೆಯ ಮಹತ್ವ ಹಾಗೂ ನಾಲ್ಕು ವಿಧದ ಮಕ್ಕಳ ಹಕ್ಕುಗಳ ಪ್ರಾಯೋಜಕತ್ವ ಕುರಿತು ಮಾಹಿತಿ ನೀಡಿದರು.
ಫ್ರೆಂಡ್ಸ್ ಸಪೋರ್ಟ್ ಫೌಂಡೇಶನ್ ಮತ್ತು ಧ್ವನಿ ಸ್ವಯಂಸೇವಾ ಸಂಸ್ಥೆ ಶಂಕರ್ ಸುರಳ್ ಅವರು ಮಕ್ಕಳ ಕಲಿಕೆಗೆ ಎಲ್ಲರೂ ಮುಂದಾಗಬೇಕೆಂದು. ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಕುರಿತು ವಿದ್ಯಾರ್ಥಿಗಳಿಗೆ ಸೂಕ್ತ ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ಸಲೀಮಾ, ಸ್ವಯಂಸೇವಕರಾದ ವೆಂಕಟೇಶ, ತಸ್ನೀಮ್, ಮಂಗಳದೇವಿ ಸೇರಿದಂತೆ ಶಾಲೆಯ ಶಿಕ್ಷಕವೃಂದರು ಉಪಸ್ಥಿತರಿದ್ದರು.
Gadi Kannadiga > State > ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಕಾನೂನು ಕಾರ್ಯಗಾರ ಯಶಸ್ವಿ
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023