ಕುಷ್ಟಗಿ:- ನಗರದ ಇಂದಿರಾ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಹಮ್ಮಿಕೊಂಡಿದ್ದ ನಲಿಕಲಿ ಶಿಕ್ಷಕರಿಗಾಗಿ ಸಮಾಲೋಚನಾ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು
ಶಿಕ್ಷಕರ ಸಿದ್ದತೆ, ಮಕ್ಕಳ ಸಿದ್ಧತೆ ಮತ್ತು ತರಗತಿಯ ಸಿದ್ಧತೆಯ ನಲಿಕಲಿ ತರಗತಿಯ ಯಶಸ್ವಿ ನಿರ್ವಹಣೆಯ ತ್ರಿ ಸೂತ್ರಗಳು, ಸ್ವತಃ ಕಲಿಕೆ ಸ್ವವೇಗದ ಕಲಿಕೆ ಸಂತಸದ ಕಲಿಕಾ ಚಟುವಟಿಕೆ ಆಧಾರಿತ ಬೋಧನಾ ಪದ್ಧತಿಯಾಗಿದ್ದು, ಮಕ್ಕಳ ಕ್ರಿಯಾತ್ಮಕ , ಮನೋಬಲಾತ್ಮಕ ಕಲಿಕೆಗೆ ಹೆಚ್ಚು ಉತ್ತೇಜನ ಕೊಡುವುದರ ಜೊತೆಗೆ , ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕಾ ಪ್ರಗತಿಯನ್ನು ಸಾಧಿಸಲು ಸಹಾಯಕವಾಗಿದೆ, ಮಗು ತನ್ನದೇ ಆದ ವೇಗದಲ್ಲಿ ಸಂತಸದಾಯಕವಾಗಿ ಕಲಿಯಲು ಅವಕಾಶ ಮಾಡಿಕೊಡುವುದು ಈ ಬೋಧನಾ ಪದ್ಧತಿಯ ವಿಶೇಷವಾಗಿದೆ, ಕೋವಿಡ್ 19 ರ ಸಾಂಕ್ರಾಮಿಕ ಸಂಕಷ್ಟದ ಕಾಲದ ನಂತರ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ನಿಪುಣ ಭಾರತ್ ಕಲಿಕಾ ಚೇತರಿಕೆಯ ಕಲಿಕಾ ಸಾಮಗ್ರಿಗಳು ನಲಿ ಕಲಿ ತರಗತಿ ನಿರ್ವಹಣೆಗೆ ಸಹಾಯಕ ಸಾಮಗ್ರಿಗಳಾಗಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹು ಉಪಯುಕ್ತವಾದ ಕಲಿಕಾ ಸಾಧನಗಳಾಗಿವೆ, ಮಾಡಿ ಕಲಿ ನೋಡಿ ಕಲಿ ಎಂಬ ತತ್ವದ ಅಡಿಯಲ್ಲಿ ಶಿಕ್ಷಕರ ಅಪಾರ ಶ್ರಮವನ್ನು ಬಯಸುವ ಈ ಬೋಧನಾ ಪದ್ಧತಿಯು ವಿದ್ಯಾರ್ಥಿಗಳ ಸೃಜನಾತ್ಮಕ ,ಸರ್ವೋತ್ಮಕ ವ್ಯಕ್ತಿತ್ವ ಬೆಳವಣಿಗೆ ನಲಿ ಕಲಿಯು ಒಂದು ಅತ್ಯುತ್ತಮ ಬೋಧನಾ ಮಾರ್ಗವಾಗಿದೆ ಎಂಬುವುದರ ಕುರಿತು ಸಮಾಲೋಚಿಸಲಾಯಿತು, ಈ ಸಂದರ್ಭದಲ್ಲಿ ಈ ಸಮಾಲೋಚನೆ ಕಾರ್ಯಕಾರಕ್ಕೆ ಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಗಡಾದವರು ಸಸಿಗೆ ನೀರಿರುವುದರ ಮೂಲಕ ಚಾಲನೆ ನೀಡಿದರು, ಕಾರ್ಯಗಾರದಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀ ತಿಮ್ಮಣ್ಣ ಹಿರೇವಳಿ, ಶಾಲಾ ಮುಖ್ಯೋಪಾಧ್ಯರದ ಶ್ರೀ ದಂಡಪ್ಪ ಹೊಸಮನಿ, ಕ್ರಿಯಾಶೀಲ ಸಂಪನ್ಮೂಲ Crp ಶ್ರೀ ನಾಗರಾಜ್ ಚನ್ನಪ್ಪನವರ್, ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶಾರದಾ ಸಿಂಗನಹಳ್ಳಿ , ಶ್ರೀಮತಿ ಲಲಿತ ಕಾಡದ, ಈ ಮಾಹೆ ಯಲ್ಲಿ ನಿರ್ವಹಿಸಬೇಕಾದ ಮೈಲುಗಲ್ಲು ಮೆಟ್ಟಿಲುವಾರು ಚಟುವಟಿಕೆಗಳ ಕುರಿತು ಮಾಹಿತಿ ಹಂಚಿಕೊಂಡರು, ಶಾಲಾ ಸಹ ಶಿಕ್ಷಕರದ ಶ್ರೀ ರಾಜಾಸಾಬ್ ನದಾಫ್, ಕುಷ್ಟಗಿ ಕ್ಲಸ್ಟರ್ನ ನಲಿ ಕಲಿ ಶಿಕ್ಷಕರು ಪಾಲ್ಗೊಂಡಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ