This is the title of the web page
This is the title of the web page

Please assign a menu to the primary menu location under menu

international

ಇಂಗ್ಲೆಂಡಿನ ಕನ್ನಡ ಬಳಗದ ಅಧ್ಯಕ್ಷರಾಗಿ ಸುಮನಾ ಗಿರೀಶ್ ಉಪಾಧ್ಯಕ್ಷರಾಗಿ ಡಾ.ಸ್ನೇಹಾ ಕುಲಕರ್ಣಿ ಆಯ್ಕೆ


ಯುನೈಟೆಡ್ ಕಿಂಗ್ ಡಮ್

ಕನ್ನಡ ಬಳಗದ ಅಧ್ಯಕ್ಷರಾಗಿ
ಶ್ರೀಮತಿ ಸುಮನಾ ಗಿರೀಶ್ ಮತ್ತು
ಉಪಾಧ್ಯಕ್ಷರಾಗಿ ಡಾ.ಸ್ನೇಹಾ ಕುಲಕರ್ಣಿ
ಅವರು ಮೂರು ವರ್ಷಗಳ ಅವಧಿಗಾಗಿ
ಆಯ್ಕೆಗೊಂಡಿದ್ದಾರೆ.2022 ರಿಂದ
2025 ರವರೆಗಿನ ಮೂರು ವರ್ಷಗಳ
ಅವಧಿಗಾಗಿ ಚುನಾವಣೆ ನಡೆದಿದ್ದು
ಕಳೆದ ಶನಿವಾರ ರಾತ್ರಿ ಫಲಿತಾಂಶ
ಪ್ರಕಟಗೊಂಡಿದೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ
ಬೆಳಗಾವಿ ಮೂಲದ ಶ್ರೀ ರಾಜೀವ
ಮೇತ್ರಿ ಅವರು ಪರಾಭವಗೊಂಡಿದ್ದರೂ
ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ.
1984 ರಲ್ಲಿ ಅಸ್ತಿತ್ವಕ್ಕೆ ಬಂದ
ಕನ್ನಡ ಬಳಗದಲ್ಲಿ 700 ಕನ್ನಡ
ಕುಟುಂಬಗಳ 1300 ಮತದಾರರಿದ್ದು
ಸುಮಾರು 400 ರಷ್ಟು ಮತದಾನವಾಗಿದೆ.
ಕಾರ್ಯದರ್ಶಿಯಾಗಿ ಡಾ.ಟಿ.ಆರ್.
ಮಧುಸೂದನ್,ಖಜಾಂಚಿಯಾಗಿ
ಡಾ.ರಶ್ಮಿ ಮಂಜುನಾಥ ಚುನಾಯಿತರಾಗಿದ್ದಾರೆ.
ನೂತನ ಪದಾಧಿಕಾರಿಗಳನ್ನು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ ಅಧ್ಯಕ್ಷ ಶ್ರೀ ಅಶೋಕ
ಚಂದರಗಿ ಅಭಿನಂದಿಸಿದ್ದಾರೆ.


Gadi Kannadiga

Leave a Reply