ಬೆಳಗಾವಿ,ಏ.೩೦: ಜಿಲ್ಲಾ ಬಾಲಭವನ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗಾಗಿ ಮೇ ೫ ರಿಂದ ೧೩ ರವರೆಗೆ ೧೦ ದಿನಗಳ ಉಚಿತ ಬೇಸಿಗೆ ಶಿಬಿರ ಹಾಗೂ ಹೊರ ಸಂಚಾರವನ್ನು ನಗರದ ಕಣಬರ್ಗಿ ರಸ್ತೆಯ ಭಾರತ ಕಾಲೋ£ಯಲ್ಲಿರುವ ಮಹಿಳಾ ಕಲ್ಯಾಣ ಸಂಸ್ಥೆಯ ಸಭಾಗೃಹದಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಆಯೋಜಿಸಲಾಗಿದೆ.
ಶಿಬಿರದಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಅನುಕೂಲವಾಗುವ ಉಪನ್ಯಾಸ, ಚಿತ್ರಕಲೆ, ಕರಕುಶಲ ಕಲೆ, ಜೇಡಿ ಮಣ್ಣಿನ ಕಲೆ, ಸಮೂಹ ನೃತ್ಯ, ಸಮೂಹ ಗೀತೆ, ಯೋಗ, ಕಿರುಚಿತ್ರ ಪ್ರದರ್ಶನ, ಹೊರಸಂಚಾರ ವಿವಿಧ ಸ್ಪರ್ದೆಗಳನ್ನು ಆಯೋಜಿಸುವ ಮೂಲಕ ಸ್ಪರ್ದಾತ್ಮಕ ಮನೋಭಾವನೆ, ನಾಯಕತ್ವ ಗುಣಗಳ ಬೆಳವಣಿಗೆಗೆ ಪ್ರತಿಭೆಗಳ ಹೊರಹಾಕಲು ಅವಕಾಶ ಕಲ್ಪಿಸಲಾಗುವುದು.
ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ದಿನಾಂಕ: ಮೇ ೩ ೨೦೨೨ರ ಸಂಜೆ ೫ ಗಂಟೆಯೊಳಗಾಗಿ ಹೆೆಸರು ನೊಂದಾಯಿಸಬಹದ. ಹೆಚ್ಚಿನ ಮಾಹಿತಿಗಾಗಿ ಎಮ್. ಎಸ್. ಚೌಗಲಾ ಅವರ ಅಥವ ಮೊಬೈಲ್ ಸಂಖ್ಯೆ ೯೬೬೩೨೧೮೮೬೦ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಬಾಲಭವನ ಸಮಿತಿಯ ಕಾರ್ಯರ್ದರ್ಶಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ £ರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಮಕ್ಕಳಿಗಾಗಿ ಬೇಸಿಗೆ ಶಿಬಿರ: ಮೇ.೫ರಿಂದ ೧೩ರವರೆಗೆ