ನೇಸರಗಿ. ಜ.೩.ಕೇಂದ್ರ ಸ್ಥಾನವಾದ ಗ್ರಾಮದ ಎಪಿಎಂಸಿ ಪ್ರಾಂಗಣದಲ್ಲಿ ಪುನಾರಂಭವಾಗಿರುವ ಜಾನುವಾರು ಮಾರುಕಟ್ಟೆಯನ್ನು ಈ ಭಾಗದ ಜನ ಸದುಪಯೋಗ ಪಡಿಸಿಕೊಂಡು ಉತ್ತಮ ಮಾರುಕಟ್ಟೆ ಮಾಡಬೇಕೆಂದು ಮಾಜಿ ಎಪಿಎಂಸಿ ಅದ್ಯಕ್ಷ ಹಾಗೂ ಪಿಕೆಪಿಎಸ್ ಅದ್ಯಕ್ಷ ರಾಜಶೇಖರ ಯತ್ತಿನಮ£ ಹೇಳಿದರು.
ಅವರು ಸೋಮವಾರದಂದು ಕ್ರಾಸ್ ಹತ್ತಿರ ಎಪಿಎಂಸಿ ಪ್ರಾಂಗಣದಲ್ಲಿ ಪುನಾರಂಭವಾದ ಜಾನುವಾರು ಮಾರುಕಟ್ಟೆಯನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಧುರೀಣ ಸಚಿನ ಪಾಟೀಲ ಮಾತನಾಡಿ ನೇಸರಗಿ ಹೊಬ್ಬಳಿ ಎಲ್ಲ ಭಾಗಗಳಲ್ಲಿ ಅಭಿವೃದ್ದಿ ಹೊಂದುತ್ತಿರುವ ಕೇಂದ್ರ ಸ್ಥಾನವಾಗಿದ್ದು ಈ ಭಾಗದ ರೈತರು ತಮ್ಮ ಜಾನುವಾರುಗಳನ್ನು ಮಾರುಕಟ್ಟೆಗೆ ತಂದು ಕೊಟ್ಟು ,ಕೊಂಡು ವಹಿವಾಟು ಮಾಡಬೇಕೆಂದರು.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ £ಂಗಪ್ಪ ಅರಕೇರಿ ಮಾತನಾಡಿ ನನ್ನ ಜಿ ಪಂ ಸೇವಾ ಅವದಿಯಲ್ಲಿ ಎಪಿಎಂಸಿಗೆ £Ãರಿನ ಸಲುವಾಗಿ ಪೈಪಲೈನ್ ಮೂಲಕ ವ್ಯವಸ್ಥೆ ಮಾಡಲಾಗಿದ್ದು ಜಿ ಪಂ ಅನುದಾನದಲ್ಲಿ ಗೋಡಾವನ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿತ್ತು.ರೈತರ ಅಭಿವೃದ್ಧಿಗೆ ಸದಾ ಸಿದ್ದ ಎಂದರು.
ಎಪಿಎಂಸಿ ಅದ್ಯಕ್ಷ ಬರಮಣ್ಣ ಸತ್ತೆನ್ನವರ ಮಾತನಾಡಿ ಈ ಭಾಗದ ಜನರ ಆಶೀರ್ವಾದದಿಂದ ಎಲ್ಲ ಜನಾಂಗದ ಬೆಂಬಲದಿAದ ಇಂದು ನಾನು ಎರಡನೇ ಅವದಿಗೆ ಎಪಿಎಂಸಿ ಅದ್ಯಕ್ಷನಾಗಿ ಸೇವೆ ಮಾಡುತ್ತಿದ್ದು ,ರೈತರಿಗೆ, ಈ ಭಾಗದ ಜನರಿಗೆ ನಾನು ಯಾವಾಗಲೂ ಋಣಿಯಾಗಿರುತ್ತೇನೆಂದರು.
ಕಾರ್ಯಕ್ರಮದಲ್ಲಿ ಎಫಿಎಂಸಿ ಕಾರ್ಯದರ್ಶಿ ಎಸ್ ಎಸ್ ಅರಳಿಕಟ್ಟಿ,ಹಿರಿಯ ರೈತ ಕೆಂಚಪ್ಪ ಕಳ್ಳಿಬಡ್ಡಿ,ಯಲ್ಲನಗೌಡ ದೊಡ್ಡಗೌಡರ,ಪಿಎಸ್ಐ ವಾಯ್ ಎಲ್ ಶೀಗಿಹಳ್ಳಿ ಜಾನುವಾರು ಮಾರುಕಟ್ಟೆ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾ ಪಂ ಅದ್ಯಕ್ಷ ಶಿವನಗೌಡ ಪಾಟೀಲ, ಅಡಿವಪ್ಪ ಮಾಳಣ್ಣವರ,ಬಾಳಪ್ಪ ಮಾಳಗಿ,ಸೋಮನಗೌಡ ಪಾಟೀಲ, ದೇಮಣ್ಣ ಗುಜನಟ್ಟಿ, ಮಲ್ಲಪ್ಪ ಬೋಳಣ್ಣವರ,ಪಡ್ಡೆಪ್ಪ ಇಂಚಲ,ಸುಜಾತ ತುಬಾಕಿ,£ಂಗಪ್ಪ ತಳವಾರ,ಸುರೇಶ ಅಗಸಿಮ£,ಮಹಾದೇವ ನಾಸಿ,ಎಪ್ ಟಿ ಕೊಳದೂರ,ಮಹಾಂತೇಶ ಪಾಟೀಲ, ವಾಸು ಹಮ್ಮನವರ,ಪ್ರಕಾಶ ತೋಟಗಿ,ವಿಷ್ಣು ಮೂಲಿಮ£,ಯಮನಪ್ಪ ಪೂಜೇರಿ,ಸೋಮಶೇಖರ ಮಾಳಣ್ಣವರ,ಮಲ್ಲಿಕಾರ್ಜುನ ಕಲ್ಲೊಳಿ,ಸಿದ್ದಿಕ್ ಬಾಗವಾನ,ಸುರೇಶ ಖಂಡ್ರಿ ಸೇರಿದಂತೆ ರಾಜಕೀಯ ಮುಖಂಡರು,ಸುತ್ತಮುತ್ತಲಿನ ಗ್ರಾಮದ ರೈತರು ಪಾಲ್ಗೊಂಡಿದ್ದರು. ಸುಮಾರು ಇಂದಿನ ಜಾನುವಾರು ಮಾರುಕಟ್ಟೆಯಲ್ಲಿ ೫೦೦ ಕ್ಕಿಂತ ವಿವಿಧ ಜಾನುವಾರಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಗೊಳಿಸಿದವು.ಕಾರ್ಯಕ್ರಮದಲ್ಲಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ ಹಿರಿಯ ರೈತರಾದ ಕೆಂಚಪ್ಪ ಕಳ್ಳಿಬಡ್ಡಿ,ಎಪಿಎಂಸಿ ಅದ್ಯಕ್ಷ ಬರಮಣ್ಣ ಸತ್ತೆನ್ನವರ, ಮತ್ತಿಕೊಪ್ಪ ಗೌಡ್ರ ಸುಪುತ್ರ ಮಹಾಂತೇಶ ಪಾಟೀಲ ಇವರನ್ನು ಸತ್ಕರಿಸಲಾಯಿತು.
Gadi Kannadiga > Local News > ನೇಸರಗಿಯಲ್ಲಿ ಪುನಾರಂಭವಾದ ಜಾನುವಾರ ಮಾರುಕಟ್ಟಿ