ಯಲಬುರ್ಗಾ:- ತಾಲ್ಲೂಕಿನ ಗಾಣಧಾಳ ಗ್ರಾಮದ ನಿವಾಸಿ ಸುನೀಲ್ ಯಮನಪ್ಪ ಬಸರಿಹಾಳ್ ಅವರು ಸಿಡಿಲು ಬಡಿದು ಮೃತಪಟ್ಟ ವಿಷಯ ತಿಳಿದು, ಸ್ಥಳಕ್ಕೆ ನವೀನ ಗುಳಗಣ್ಣವರ್ ಮತ್ತು ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿ, ಅರವಿಂದ ಗೌಡ್ರು, ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದೆವು.
ಘಟನೆಯಲ್ಲಿ ಅವರ 13 ಕುರಿಗಳು ಮೃತಪಟ್ಟಿದ್ದು, ಕುಟುಂಬಸ್ಥರಿಗೆ ವೈಯಕ್ತಿಕ ಧನ ಸಹಾಯ ಮಾಡಿ, ಸರ್ಕಾರದ ವತಿಯಿಂದ ಶೀಘ್ರವಾಗಿ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕಾಗಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಜಯಕುಮಾರ್ ತಾಳಕೇರಿ, ಆದೇಶ ರೊಟ್ಟಿ, ಗುಂಡಪ್ಪ ಹಿರೇವಂಕಲಕುಂಟಾ, ನಿಂಗರಾಜ್ ಗುಳೇದ್, ಚಂದಾಲಿಂಗಪ್ಪ ವನಜಭಾವಿ, ನಿಂಗಪ್ಪ ಕಲಬಾವಿ, ದೇವಪ್ಪ ವಜ್ರ, ವಿರೂಪಾಕ್ಷ ದೇವಲ್, ಮಲ್ಲಪ್ಪ ಹಳ್ಳಿ, ರಮೇಶ್ ಗದ್ದಿ, ಶಂಕರ್ ಮೇಟಿ, ಹಾಗೂ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ