ಬೆಳಗಾವಿ: ಯುವತಿ ಅನುಮಾನಾಸ್ಪದ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ತಬಸ್ಸುಮ್ ಸವದತ್ತಿ(19) ಮೃತ ಯುವತಿ.
ಬೆಂಗಳೂರಿನಲ್ಲಿ ಕಾಲ್ ಸೆಂಟರ್ನಲ್ಲಿ ತಬಸ್ಸುಮ್ ಕೆಲಸ ಮಾಡುತ್ತಿದ್ದಳು. ನಿನ್ನೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ಅಪರಿಚಿತ ಯುವಕ ದಾಖಲಿಸಿದ್ದ. ಈ ಬಗ್ಗೆ ದೂರು ನೀಡಿ ಎಂದಿದ್ದಕ್ಕೆ ಯುವತಿಯ ಮೊಬೈಲ್ನೊಂದಿಗೆ ಯುವಕ ಪರಾರಿಯಾಗಿದ್ದಾನೆ.