This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ಶೈಕ್ಷಣಿಕ ಜಿಲ್ಲೆ: ೩೮ ಶಾಲೆ ಹಾಗೂ ಕಾಲೇಜುಗಳಿಗೆ “ಸ್ವಚ್ಛ ವಿದ್ಯಾಲಯ ಪುರಸ್ಕಾರ”


ಬೆಳಗಾವಿ,ಜೂನ್೩೦: ಬೆಳಗಾವಿ (ದ) ಜಿಲ್ಲೆಯ ಎಲ್ಲ ವಲಯಗಳ ೧೨೮೬ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳ ಪೈಕಿ ಜಿಲ್ಲಾ ಮಟ್ಟಕ್ಕೆ ೩೮ ಶಾಲೆ ಹಾಗೂ ಕಾಲೇಜುಗಳು ಭಾರತ ಸರ್ಕಾರ ಆಯೋಜಿಸಿರುವ “ಸ್ವಚ್ಚ ವಿದ್ಯಾಲಯ ಪುರಸ್ಕಾರ” ಪ್ರಶಸ್ತಿ ಪಡೆದುಕೊಂಡಿವೆ. ಶಾಲೆಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಅಭ್ಯಾಸ ಉತ್ತೇಜನಕ್ಕಾಗಿ “ಸ್ವಚ್ಛ ವಿದ್ಯಾಲಯ ಪುರಸ್ಕಾರ” ಎಂಬ ಸ್ಪರ್ಧಾ ಯೋಜನೆಯನ್ನು ಯುನಿಸೆಫ್, ಕೇಂದ್ರ ಸರ್ಕಾರ, ಸಮಗ್ರ ಶಿಕ್ಷಣ ಕರ್ನಾಟಕ, ಮತ್ತು ಕೇಂದ್ರ ಪರಿಸರ ಶಿಕ್ಷಣ ಇಲಾಖೆಗಳು ಜಂಟಿಯಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಿವೆ. ಕಾರ್ಯಕ್ರಮವು ೬ Sub-ಅಚಿಣegoಡಿಥಿಯಲ್ಲಿ ೩೦ ಶಾಲೆಗಳು ಹಾಗೂ ಔveಡಿ ಂಟಟ ಅಚಿಣegoಡಿಥಿ ಯಲ್ಲಿ ೮ ಶಾಲೆಗಳು ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದಿವೆ. ಇದರಲ್ಲಿ ೧೪ ಶಾಲೆಗಳು ರಾಜ್ಯ ಮಟ್ಟದ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿವೆ. ಈ ಪ್ರಶಸ್ತಿ ಸಮಾರಂಭವು ಗುರುವಾರ(ಜೂನ್೩೦) ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಭಾ¨ sÀವನದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ನಿತೇಶ ಕೆ ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಿತು.ಸಮಾರಂಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ದರ್ಶನಎಚ್.ವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಬಸವರಾಜ ನಲತವಾಡ, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಬಿ.ಎಚ್ ಮಿಲ್ಲಾನಟ್ಟಿ,. ಕೆ.ಎಸ್ ನಂದೇರ, ಸಹಾಯಕ ಯೋಜನಾ ಸಮನ್ವಯಾಧಿಕಾರಿ ಆರ್.ಜಿ ಮೆಳವಂಕಿ, ಸಹಾಯಕ ಯೋಜನಾ ಸಮನ್ವಯಾಧಿಕಾರಿ ಎಸ್.ಡಿ ನದಾಫ, ಸಮಗ್ರ ಶಿಕ್ಷಣ ತಾಂತ್ರಿಕ ಸಹಾಯಕರಾದ ಆರ್.ಎಸ್ ನಾಯಿಕ ಇತರರು ಉಪಸ್ಥಿತರಿದ್ದರು.


Gadi Kannadiga

Leave a Reply