This is the title of the web page
This is the title of the web page

Please assign a menu to the primary menu location under menu

State

ಸ್ವಚ್ಛತಾ ಹಿ ಸೇವಾ ಅಭಿಯಾನ : ಶಾಲೆಯಿಂದಲೇ ಸ್ವಚ್ಛತೆಗೆ ಚಾಲನೆ


ಕೊಪ್ಪಳ, ಸೆ. ೨೧ : ಸ್ವಚ್ಛತಾ ಹಿ ಸೇವಾ ಅಭಿಯಾನ ಅಂಗವಾಗಿ ತಾಲೂಕಿನ ಲೇಬಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿಂದು (ಸೆ.೨೧) ಶಾಲೆಯಿಂದಲೇ ಸ್ವಚ್ಛತೆಗೆ ಚಾಲನೆ ನೀಡಲಾಯಿತು.
ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಬುಧವಾರದಂದು “ಸ್ವಚ್ಛತಾ ಹಿ ಸೇವಾ’’ ಆಂದೋಲನದ ಅಂಗವಾಗಿ ಶಾಲಾ ಮಕ್ಕಳಿಗೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ನಂತರ ಗ್ರಾಮ ನೈರ್ನಲ್ಯ ನಕ್ಷೆಯ ಮೂಲಕ ಗ್ರಾಮದ ಸ್ವಚ್ಛತೆ ಬಗ್ಗೆ ವಿಶೇಷ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಲೇಬಗೇರಿ ಗ್ರಾಮ ಪಂಚಾಯತ ಅಧ್ಯಕ್ಷ ನಾಗಪ್ಪ ದೊಡ್ಡಮನಿ, ಸದಸ್ಯರಾದ ಬಸವರಾಜ ಯತ್ನಟ್ಟಿ, ಫಕೀರಗೌಡ್ರ, ಶಂಕ್ರವ್ವ ದುರಗಪ್ಪ ಗುಳೇದ, ಭರಮವ್ವ ತಳವಾರ, ಸಿದ್ದಮ್ಮ ಬಂಗಾರಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಹಾಗೂ ಜಿಲ್ಲಾ ಪಂಚಾಯತ ಸ್ವಚ್ಛ ಭಾರತ ಮಿಷನ್(ಗ್ರಾ) ಸಮಾಲೋಜಕಿ ಬಸಮ್ಮ ಹುಡೇದ, ಐ,ಇ,ಸಿ ಸಮಾಲೋಕ ಮಾರುತಿ ನಾಯಕರ ಸೇರಿದಂತೆ ನರೇಗಾ ಯೋಜನೆಯ ಜಿಲ್ಲಾ ತಾಲ್ಲೂಕ ಐ.ಇ.ಸಿ ಸಂಯೋಜಕರು, ತಾಲೂಕ ತಾಂತ್ರಿಕ ಸಂಯೋಜಕರು, ಗ್ರಾಮ ಪಂಚಾಯತ ಸಿಬ್ಬಂದಿ ವರ್ಗದವರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಶಾಲಾ ಮಕ್ಕಳು, ಗ್ರಾಮದ ಸಾರ್ವಜನಿಕರು ಪಾಲ್ಗೊಂಡಿದ್ದರು.


Gadi Kannadiga

Leave a Reply